ಕಾಸರಗೋಡು, ಮೇ 13 (DaijiworldNews/ AK): ಗುಜರಿ ಅಂಗಡಿಯಿಂದ ಕಳವುಗೈ ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ನಾಗರಿಕರು ಹಿಡಿದು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ ಘಟನೆ ಶನಿವಾರ ರಾತ್ರಿ ಮಂಜೇಶ್ವರ ದಲ್ಲಿ ನಡೆದಿದೆ.
ಹಾಸನದ ಅಶೋಕ್ ( 35) ಮತ್ತು ತಮಿಳುನಾಡಿನ ಹರೀಶ್ಚ೦ದ್ರ ( 35) ಬಂಧಿತರು. ಹೊಸಬೆಟ್ಟು ವಿನಲ್ಲಿರುವ ಕರೀಂ ಎಂಬವರ ಮಾಲಕತ್ವದ ಗುಜರಿ ಅಂಗಡಿಯಿಂದ ಒಂದು ಕಿಲೋ ಹಿತ್ತಾಳೆ ಸಾಮಾಗ್ರಿಗಳು , ಎರಡು ಸಿ ಸಿ ಟಿ ವಿ ಕ್ಯಾಮಾರ ಗಳನ್ನು ಕಳವು ಮಾಡಿದ್ದರು.
ರಾತ್ರಿ 12 ಗಂಟೆ ಸುಮಾರಿಗೆ ಮಂಜೇಶ್ವರ ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಕಂಡ ಬಂದ ಇವರನ್ನು ಪ್ರಶ್ನಿಸಿದ ನಾಗರಿಕರು ಕೈಯಲ್ಲಿದ್ದ ಚೀಲವನ್ನು ತಪಾಸಣೆ ನಡೆಸಿದಾಗ ಹಿತ್ತಾಳೆ ಸಾಮಾಗ್ರಿ ಮತ್ತು ಸಿ ಸಿ ಟಿ ವಿ ಕ್ಯಾಮರಾ ಪತ್ತೆಯಾಗಿವೆ . ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಕಳವು ನಡೆಸಿರುವುದು ಬೆಳಕಿಗೆ ಬಂದಿದೆ .
ಈ ಅಂಗಡಿಯಿಂದ ಎರಡು ಬಾರಿ ಕಳವು ನಡೆಸಲಾಗಿತ್ತು. ಎರಡೂ ಬಾರೀ ಇವರೇ ಕಳವು ಮಾಡಿದ್ದರು. ಮೂರನೇ ಬಾರಿ ಕಳವು ಮಾಡಿ ಹಿಂತಿರುಗುತ್ತಿದ್ದಾಗ ನಾಗರಿಕರ ಬಲೆಗೆ ಬಿದ್ದು ಪೋಲೀಸರ ಬಲೆಗೆ ಬಿದ್ದಿದ್ದಾರೆ.