ಬೈಂದೂರು, ಮೇ 13 (DaijiworldNews/ AK): ಶ್ರೀನಿವಾಸ ಖಾರ್ವಿ ರವರ ಶ್ರೀ ಹಕ್ರೆಮಠ ಯಕ್ಷೇಶ್ವರಿ ಪ್ರಸಾದ ರಾಣಿ ಬಲೆ ದೋಣಿಯ ರೋಪನ್ನು ತುಂಡರಿಸಿ 95 ಹಿತ್ತಾಳೆಯ ರಿಂಗ್ ಗಳನ್ನು ಕಳ್ಳರು ದೋಚಿರುವ ಘಟನೆ ಮಾರ್ಚ್ 16 ರಂದು ನಡೆದಿದೆ. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪುಂದ ಗ್ರಾಮದ ಕರ್ಕಿಕಳಿ ಎಡಮಾವಿ ಹೊಳೆ ಸಮೀಪದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಪ್ರಕರಣವನ್ನು ಡಾ. ಹರ್ಷ ಪ್ರಿಯಂವದಾ ಪ್ರೋಬೇಷನರಿ ಐಪಿಎಸ್ ರವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ಸಿಯಾಗಿದ್ದಾರೆ. ಮಾ.11 ರಂದು ಉಪ್ಪುಂದ ಗ್ರಾಮ ಬೈಂದೂರು ತಾಲೂಕಿನ ಆರೋಪಿ ಮಹೇಶ್ ಖಾರ್ವಿ (30 ವರ್ಷ) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ 1,00,000 ರೂ. ಮೌಲ್ಯದ 95 ಹಿತ್ತಾಳೆ ರಿಂಗ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ದಲಿಂಗಪ್ಪ ಹಾಗೂ ಪರಮೇಶ್ವರ ಹೆಗಡೆ ಉಡುಪಿ ಜಿಲ್ಲೆ ರವರ ಇವರ ನಿರ್ದೇಶನದಲ್ಲಿ, ಬೆಳ್ಳಿಯಪ್ಪ ಕೆ.ಯು ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಸವಿತ್ರ ತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ಮಾರ್ಗದರ್ಶನದಲ್ಲಿ ಡಾ. ಹರ್ಷ ಪ್ರಿಯಂವದಾ ಪ್ರೋಬೇಷನರಿ ಐಪಿಎಸ್, ತಿಮ್ಮೇಶ್ ಬಿ.ಎನ್ ಪಿ.ಎಸ್.ಐ. (ಕಾ.ಸು) ಹಾಗೂ ಮಹೇಶ ಕಂಬಿ ಪಿ.ಎಸ್.ಐ, ಸೂರ ನಾಯ್ಕ ಎಎಸ್ ಐ, ಮಹೆಚ್ ಸಿ ನಾಗಶ್ರೀ,ಅಪರಾಧ ವಿಭಾಗದ ಸಿಬ್ಬಂದಿಯವರಾದ, ಸುಜಿತ್ ಕುಮಾರ್, ಮಾಳಪ್ಪ ದೇಸಾಯಿ, ರವರು ಸಹಕರಿಸಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ ಕೆ, ಐ.ಪಿ.ಎಸ್.ಸಹಕರದಲ್ಲಿ . ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಅರುಣ ಕೆ, ಐ.ಪಿ.ಎಸ್. ರವರು ಅಭಿನಂದಿಸಿದ್ದಾರೆ.