ಕಾಸರಗೋಡು, ಮೇ.12(DaijiworldNews/AK): ಜಿಲ್ಲೆಯಲ್ಲಿ ಅಕ್ರಮ ಕೆಂಗಲ್ಲು ಮತ್ತು ಅಕ್ರಮ ಮರಳುಗಾರಿಕೆ ವಿರುದ್ಧ ಜಿಲ್ಲಾಧಿಕಾರಿ ಕೆ . ಇಂಪಾ ಶೇಖರ್ ರವರ ನಿರ್ದೇಶನದಂತೆ ಕಾರ್ಯಾಚರಣೆ ಮುಂದುವರಿದಿದೆ.
ಇಂದು ಅಕ್ರಮ ಮರಳುಗಾರಿಕೆ ವಿರುದ್ಧ ದಾಳಿ ನಡೆಸಿ , ಒಂದು ಟಿಪ್ಪರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಾಗಾಟಕ್ಕೆ ದಾಸ್ತಾನಿಡಲಾಗಿದ್ದ ನದಿ ಮರಳನ್ನು ವಶಪಡಿಸಕೊಳ್ಳಲಾಗಿದೆ.
ಮರಳು ಸಾಗಿಸುತ್ತಿದ್ದ ಯು . ಅಬ್ದುಲ್ ಖಾದರ್ ನ ಮೊಬೈಲ್ ನ್ನು ವಶಪಡಿಸಿಕೊಳ್ಳಲಾಗಿದೆ.ಇಂದು ಬೆಳಿಗ್ಗೆ ಚೇವಾರ್ ನಿಂದ ಟಿಪ್ಪರ್ ಸಹಿತ ಮರಳನ್ನು ಜಿಲ್ಲಾಧಿಕಾರಿ ಕೆ ಇಂಪಾಶೇಖರ್ ರವರ ನೇತೃತ್ವದಲ್ಲಿ ವಶಕ್ಕೆ ಪಡೆದುಕೊಳ್ಳಲಾಯಿತು.
ಟಿಪ್ಪರನ್ನು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಅಕ್ರಮ ಕೆಂಗಲ್ಲು ಹಾಗೂ ಮರಳುಗಾರಿಕೆಗೆ ತಡೆಯಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಶನಿವಾರ ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಕೆಂಗಲ್ಲು ಸಾಗಾಟದ ಆರು ಲಾರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಜಿಲ್ಲೆಯಲ್ಲಿ ಕೆಂಗಲ್ಲು ಸೇರಿದಂತೆ ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ತಿಳಿಸಿದ್ದಾರೆ