ಕುಂದಾಪುರ, ಮೇ.12(DaijiworldNews/AK): ಪೆಟ್ರೋಲ್ ಬಂಕ್ ಒಂದಕ್ಕೆ ಡುಪ್ಲಿಕೇಟ್ ಕೀ ಬಳಸಿ ನುಗ್ಗಿದ ಕಳ್ಳರು ಎರಡು ಮೊಬೈಲ್ ಹಾಗೂ ಹಣ ತುಂಬಿಸಿಟ್ಟ ಬ್ಯಾಗ್ ಕಿತ್ತುಕೊಂಡು ಪರಾರಿ ಆಗುವ ಸಂದರ್ಭ ಜಟಾಪಡಿ ನಡೆದ ಘಟನೆ ಶನಿವಾರ ತಡರಾತ್ರಿ ಕನಕ ಪೆಟ್ರೋಲ್ ಬಂಕಿನಲ್ಲಿ ನಡೆದಿದೆ.
ರಾತ್ರಿ 11:00 ವರೆಗೆ ಕಾರ್ಯನಿರ್ವಹಿಸಿದ ಸೇಲ್ಸ್ ಮ್ಯಾನ್ ಬಳಿಕ ಊಟ ಮಾಡಿ ಮೊಬೈಲುಗಳೆರಡನ್ನು ಮತ್ತು ಕ್ಯಾಶ್ಬನ್ ಬ್ಯಾಗನ್ನು ಪೆಟ್ರೋಲ್ ಬಂಕಿನ ಒಳಗೆ ಇಟ್ಟು ಬೀಗ ಹಾಕಿ ಹೊರಗಡೆ ಮಲಗಿದ್ದ.
ರಾತ್ರಿ ಸುಮಾರು 12 ಗಂಟೆಯ ಬಳಿಕ ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ಡೂಪ್ಲಿಕೇಟ್ ಕೀ ಪಡೆದಿದ್ದಾನೆ. ಪೆಟ್ರೋಲ್ ಬಂಕಿನ ಒಳಗೆ ಇಡಲಾಗಿದ್ದ ಎರಡು ಮೊಬೈಲ್ ಹಾಗೂ ಕ್ಯಾಶ್ ಬ್ಯಾಗ್ ನ್ನು ಹಿಡಿದು ಹೊರಬಂದ ವೇಳೆ ತಕ್ಷಣ ಕೂಗಿಕೊಂಡು ಕಳ್ಳರನ್ನು ಅಟ್ಟಿಸಿಕೊಂಡು ಹೋಗಿ ಅಡ್ಡಗಟ್ಟಿದ್ದಾನೆ. ಈ ಸಂದರ್ಭ ಒಬ್ಬ ಬೈಕಿನಿಂದ ಬಿದ್ದಿದ್ದು, ಅವನ ರಕ್ಷಣೆಗೆ ಮತ್ತೊಬ್ಬ ಓಡಿ ಬಂದಿದ್ದು, ಸೇಲ್ಸ್ ಮ್ಯಾನ್ ಹಾಗೂ ಕಳ್ಳರ ನಡುವೆ ಜಗಳ ನಡೆದಿದ್ದು, ಕಳ್ಳರ ಕೈಯಲ್ಲಿದ್ದ ಕ್ಯಾಶ್ ಬ್ಯಾಗನ್ನು ಕಿತ್ತುಕೊಳ್ಳುವಲ್ಲಿ ಸೇಲ್ಸ್ ಮ್ಯಾನ್ ಯಶಸ್ವಿಯಾಗಿದ್ದಾನೆ. ಆದರೆ ಎರಡು ಮೊಬೈಲ್ ಗಳನ್ಬು ಕಳ್ಳರು ಕದ್ದೊಯ್ದಿದ್ದಾರೆ.
ಬೈಕಿನಲ್ಲಿ ಬಂದ ಇಬ್ಬರ ಪೈಕಿ ಒಬ್ಬ ಹೆಲ್ಮೆಟ್ ಹಾಕಿಕೊಂಡಿದ್ದು, ಮತ್ತೊಬ್ಬ ಮಾಸ್ಕ್ ಧರಿಸಿದ್ದ ಎಂದು ಸೇಲ್ಸ್ ಮ್ಯಾನ್ ತಿಳಿಸಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.