ಉಡುಪಿ, ಮೇ 9 (DaijiworldNews/ AK):ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಮಿಕಲ್ ಬೆಟ್ಟದಲ್ಲಿ ಪುನರ್ ಸ್ಥಾಪಿಸಿ ಹಿಂದೂಗಳ ಧಾರ್ಮಿಕ ನಂಬಿಕೆಯನ್ನು ಉಳಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪರಶುರಾಮ ಥೀಮ್ ಪಾರ್ಕ್ ಹಗರಣದ ತನಿಖೆಯನ್ನು ರಾಜ್ಯ ಸರಕಾರದಿಂದ ನಿಯೋಜಿತಗೊಂಡಿರುವ CID ತಂಡ ತನಿಖೆಯನ್ನು ನೆಡೆಸುತ್ತಿದ್ದು ನಾಗ ಮೋಹನ್ ದಾಸ್ ವಿಚಾರಣಾ ಆಯೋಗದ ತನಿಖೆಯ ಅಂತಿಮ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸುವವರೆಗೆ ಯಾವುದೇ ಕಾರಣಕ್ಕೂ ಪರಶುರಾಮ ಮೂರ್ತಿಗೆ ಸಂಬಂಧಿತ ಕಂಚು ಖರೀದಿಯಲ್ಲಿ GST ವಂಚನೆ ಮಾಡಿರುವ ಶಿಲ್ಪಿ ಕೃಷ್ಣ ನಾಯಕ್ - Krish Art World ರವರಿಗೆ ಪರಶುರಾಮ ಮೂರ್ತಿಯ ಉಳಿದ ಭಾಗವನ್ನು ತೆಗೆದು ಹಸ್ತಾಂತರ ಮಾಡಬಾರದು ಎಂದು ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ (ರಿ) ಇದರ ಗೌರವಾದ್ಯಕ್ಷರಾದ ಕೆ ಕೃಷ್ಣ ಮೂರ್ತಿ ಆಚಾರ್ಯ ರವರು ಜಿಲ್ಲಾಧಿಕಾರಿಗೆ ದಾಖಲೆ ಸಮೇತ ಮನವಿಯನ್ನು ಮಾಡಿದರು.