ಮಂಗಳೂರು, ನ 20: ಗಾಣಿಗಾಸ್ ಯಾನೆ ಸಪಲಿಗಾಸ್ ಪರಿವಾರ್ ಇದರ ಪ್ರಾಯೋಜಕತ್ವದಲ್ಲಿ ದಿ ನಾಗೇಶ್ ಗಾಣಿಗ ವೇದಿಕೆಯಲ್ಲಿ ಗಾಣಿಗಾ ಸಂಗಮ 2018 ಪ್ರತೀ ವರ್ಷದಂತೆ ಈ ಬಾರಿಯು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಗಾಣಿಗಾ ಸಂಗಮ 2018 ರ ಕಾರ್ಯಕ್ರಮದ ನಿಮಿತ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಗರದ ಅತ್ತಾವರದಲ್ಲಿರುವ ಉಮಾ ಮಹೇಶ್ವರಿ ದೇವಾಲಯದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆ ಮುನ್ನ ಪತ್ರಿಕೆಯನ್ನು ಹರಿವಾಣದಲ್ಲಿಟ್ಟು ಅರ್ಚಕರು ಶ್ರೀದೇವರಿಗೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿವೈಎಸ್ಪಿ ಗೌರವಾಧ್ಯಕ್ಷ ಜನಾರ್ದನ ಅರ್ಕುಳ, ಸದಸ್ಯ ಪ್ರಮೋದ್ ಕರ್ಕೇರ, ಉಮಾ ಮಹೇಶ್ವರಿ ದೇವಾಲಯದ ಮುಖ್ಯಸ್ಥರಾದ ಪ್ರೇಮ್ ಸಾಲಿಯಾನ್, ಮಹಿಳಾ ಘಟಕದ ಅಧ್ಯಕ್ಷೆ ಶಾರದ ಮೊದಲಾದವರು ಉಪಸ್ಥಿತರಿದ್ದರು.
ಜನವರಿ 21 ರಂದು ಮೂರನೇ ವರ್ಷದ ಸಮಾರಂಭ ನಡೆಯಲಿದ್ದು, ನೃತ್ಯ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದೆ. ಝೀಟಿವಿ ಕನ್ನಡ ವಾಹಿನಿಯ ನೃತ್ಯ ಸ್ಪರ್ಧೆಯ ಸಾರೆಗಮಪದ ಸೋನೆಲ್, ಖ್ಯಾತ ಚಿತ್ರ ಕಲಾವಿದೆ ಶಬರಿ ಗಾಣಿಗ, ವೈಟ್ಲಿಫ್ಟರ್ ಚಂದ್ರಶೇಖರ್, ಬಾಲ ಕಲಾವಿದೆ ಚಿತ್ರಾಲಿ, ಪ್ರಣತಿ ಗಾಣಿಗ ಮೊದಲಾದ ಖ್ಯಾತ ನಾಮರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕ ಪ್ರಮೋದ್ ವಿವರಿಸಿದರು.