ಉಡುಪಿ, ಮೇ.7(DaijiworldNews/AK): ಕರಾವಳಿ ಕರ್ನಾಟಕದಾದ್ಯಂತ ತನ್ನ ವಿಶಿಷ್ಟ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ದಾಯ್ಜಿವಲ್ಡ್ 24*7ವಾಹಿನಿಯಲ್ಲಿ ಇದೀಗ ಉದಯೋನ್ಮುಖ ಸಂಗೀತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಾಯ್ಜಿವಲ್ಡ್ ಸ್ವರ ಸಾಗರ ಎಂಬ ವಿನೂತನ ಗಾಯನ ಸ್ಪರ್ಧೆ ಯನ್ನು ಪ್ರಸ್ತುತಪಡಿಸಿದೆ.
ದಾಯ್ಜಿವಲ್ಡ್ ಉಡುಪಿ, ಕಿಶೂ ಎಂಟರ್ ಪ್ರೈಸಸ್ ಬ್ಯಾನರ್ ನಡಿಯಲ್ಲಿ ಸ್ಪರ್ಧೆಯು ಆಯೋಜನೆ ಗೊಂಡಿದ್ದು, 16 ವರ್ಷ ಮೇಲ್ಪಟ್ಟ ಆಸಕ್ತರು ಇದರಲ್ಲಿ ಭಾಗವಹಿಸಬಹುದು. ಸ್ಪರ್ಧೆಗೆ ಈಗಾಗಲೇ ನೋಂದಾವಣೆ ಆರಂಭಗೊಂಡಿದ್ದು, ಮೇ 26 ರಂದು ಉಡುಪಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಡಿಶನ್ ನಡೆಯಲಿದೆ. ವಿಜೇತರಿಗೆ ಸುಮಾರು 1 ಲಕ್ಷ ರುಪಾಯಿ ನಷ್ಟು ಮೊತ್ತದ ಬಹುಮಾನಗಳನ್ನು ಗೆಲ್ಲುವ ಸುರ್ವಣಾವಕಾಶವಿದೆ.
ದಾಯ್ಜಿವರ್ಲ್ಡ್ ಸ್ವರ ಸಾಗರ, ಸುಪ್ತ ಪ್ರತಿಭೆಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ಗಾಯನ ಸ್ಪರ್ಧೆಯಾಗಿದೆ. ಈ ಅತ್ಯಾಕರ್ಷಕ ಸ್ಪರ್ಧೆಯ ಎಲ್ಲಾ ಸಂಚಿಕೆಗಳು ಡೈಜಿವರ್ಲ್ಡ್ ಟಿವಿ 24x7 ಚಾನೆಲ್ನಲ್ಲಿ ಪ್ರಸಾರವಾಗಲಿದೆ.
ನಿಯಮಗಳು :
1. 16 ವರ್ಷ ಮೇಲ್ಪಟ್ಟವರಿಗೆ ಅವಕಾಶ.
2. ಸಂಗೀತದ ಜ್ಞಾನ ಹೊಂದಿರಬೇಕು. (ಶೃತಿ, ತಾಳ, ಲಯ)
3. ಆಡಿಷನ್ನಲ್ಲಿ ಒಬ್ಬರಿಗೆ 2-3 ನಿಮಿಷಗಳ ಕಾಲ ಹಾಡಲು ಅವಕಾಶವಿರುತ್ತದೆ.
4. ಆಡಿಷನ್ನಲ್ಲಿ ಕನ್ನಡ ಮತ್ತು ಹಿಂದಿ ಭಾಷೆಯ ಹಾಡನ್ನು ಹಾಡಬಹುದು.
5. ಆಡಿಷನ್ ಸುತ್ತಿನಲ್ಲಿ ಕೀಬೋರ್ಡ್ ಸಂಗೀತ ಉಪಕರಣವನ್ನು ಕಾರ್ಯಕ್ರಮದ ಆಯೋಜಕರು ಒದಗಿಸಲಿದ್ದಾರೆ.
6. ಯಾವುದೇ ಧಾರ್ಮಿಕ ಭಾವನೆ,ಜಾತಿ, ಧರ್ಮ ಮತ್ತು ಧಾರ್ಮಿಕ ವಿಚಾರಗಳಿಗೆ ಧಕ್ಕೆ ತರುವಂತಹ ಹಾಡುಗಳನ್ನು ಸ್ಪರ್ಧಿಗಳು ಹಾಡುವಂತಿಲ್ಲ.
7. ಆಡಿಷನ್ ನಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
8. ಆಡಿಷನ್ ಸುತ್ತಿನಲ್ಲಿ ಗೋಲ್ಡನ್ ಮೈಕ್ ಪಡೆದ ಸ್ಪರ್ಧಾರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗಲಿದ್ದಾರೆ
9. ಸ್ಪರ್ಧೆಯು ಕನ್ನಡ ಭಾಷೆಯಲ್ಲಿ ನಡೆಯುತ್ತದೆ.
10. ಆಡಿಶನ್ನಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
11. ಮುಂದಿನ ಹಂತಕ್ಕೆ ಆಯ್ಕೆಯಾದ ಸ್ಪರ್ಧಿಗಳು ರೆಕಾರ್ಡಿಂಗ್ ಇರುವ ದಿನ ಕಡ್ಡಾಯವಾಗಿ ಹಾಜರಿರತಕ್ಕದ್ದು. ಮರು ಅವಕಾಶ ನೀಡಲಾಗುವುದಿಲ್ಲ.
12. ಆಡಿಷನ್ ನಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾರ್ಥಿಗಳು ಆಡಿಷನ್ ಸುತ್ತಿನಲ್ಲಿ ತಾವು ಹಾಡುವ ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ದಾಖಲಾತಿ ಸಂಧರ್ಭದಲ್ಲಿ ಕಡ್ಡಾಯವಾಗಿ ನೀಡುವುದು.
13. ಸ್ಪರ್ಧೆಯು ವಿವಿಧ ಹಂತಗಳಲ್ಲಿ ನಡೆಯಲಿದ್ದು, ಈ ಸ್ಪರ್ಧೆಯ ಎಲ್ಲಾ ರೆಕಾರ್ಡಿಂಗನ್ನು ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದಲ್ಲಿ ನಡೆಸಲಾಗುತ್ತದೆ.
14. ತೀರ್ಪುಗಾರರ ತೀರ್ಮಾನವೇ ಅಂತಿಮ.
15. ಯಾವುದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿನ ಬದಲಾವಣೆ ಹಾಗೂ ಕಾರ್ಯಕ್ರಮವನ್ನು ರದ್ದುಮಾಡುವ ಎಲ್ಲಾ ಹಕ್ಕುಗಳನ್ನು ಕಾರ್ಯಕ್ರಮದ ಆಯೋಜಕರು ಹೊಂದಿರುತ್ತಾರೆ.
ಆಡಿಷನ್ನಲ್ಲಿ ಭಾಗವಹಿಸಲು, ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ: www.daijiworldudupi.com/dss/
ದಾಯ್ಜಿವಲ್ಡ್ ಉಡುಪಿ
ಮೂರನೇ ಮಹಡಿ, ಮಾಂಡವಿ ಟ್ರೇಡ್ ಸೆಂಟರ್ ಕಡಿಯಾಳಿ ಉಡುಪಿ – 576102
ಈಮೇಲ್ :contestdwudupi@gmail.com
ಮೊಬೈಲ್ : +91 73386 37690 / +91 99001 61556.