ಕಾಸರಗೋಡು, ಮೇ.7(DaijiworldNews/AA): ಇಂದು ಬೆಳಿಗ್ಗೆ ಕಾಸರಗೋಡು ಸುತ್ತಮುತ್ತ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿದಿದ್ದು, ಚೆರ್ಕಳ ಪೇಟೆಯಲ್ಲಿನ ಹಲವು ಅಂಗಡಿಗಳಿಗೆ ನೀರು ನುಗ್ಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದರಿಂದ ಈ ಸಮಸ್ಯೆ ತಲೆದೋರಿದೆ. ಕಾಸರಗೋಡು ಸುತ್ತಮುತ್ತ ಮೊದಲ ಬೇಸಿಗೆ ಮಳೆ ಸುರಿದಿದ್ದು, ಕೆಲವೆಡೆ ಉತ್ತಮ ಮಳೆಯಾಗಿದೆ ಎಂದು ತಿಳಿದುಬಂದಿದೆ.