ಬಂಟ್ವಾಳ, ಮೇ.7(DaijiworldNews/AA): ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾದ ಘಟನೆ ಬಂಟ್ವಾಳದ ತುಂಬೆ ವಳವೂರಿನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಉಪ್ಪಿನಂಗಡಿ ವಳಾಲು ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ.
ಸಂತೋಷ್ ಮೃತದೇಹವು ಮದುವೆ ಸಭಾಂಗಣದ ಕಂಪೌಂಡ್ ನ ಒಳಗಡೆ ರಕ್ತಸಿಕ್ತವಾಗಿ ಬಿದ್ದುಕೊಂಡಿತ್ತು. ಸಭಾಂಗಣದ ಹೊರಗಡೆಯಲ್ಲಿ ಈತನ ಬೈಕ್ ಪತ್ತೆಯಾಗಿದೆ.
ಸಂತೋಷ್ ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ ಆದರೆ ಪೊಲೀಸ್ ಮೂಲಗಳ ಪ್ರಕಾರ ಈತ ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತು ಕೊಂಡಿರಬೇಕು. ಆ ಸಂದರ್ಭದಲ್ಲಿ ನಿಯಂತ್ರಣ ಕಳೆದು ಕೆಳಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.
ಇನ್ನು ಘಟನೆಯ ಸಂಬಂಧ ಹೆಚ್ಚಿನ ವಿವರ ಮೃತದೇಹದ ಮರಣೋತ್ತರ ಪರೀಕ್ಷೆ ಬಳಿಕ ತಿಳಿಯಬೇಕಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.