ಕಾಸರಗೋಡು, ಮೇ.6(DaijiworldNews/AK):ಹೊಳೆಗೆ ಸ್ನಾನ ಕ್ಕಿಳಿದ ಯುವಕ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಪಯಸ್ವಿನಿ ಹೊಳೆಯ ಆದೂರು ಮಂಞಿಪ್ಪಾರೆ ಯಲ್ಲಿ ರವಿವಾರ ಸಂಜೆ ನಡೆದಿದೆ.
ಆದೂರು ಮಂಞಿಪ್ಪಾರೆಯ ಇಲ್ಯಾಸ್ (31) ಮೃತ ಪಟ್ಟವರು. ಸ್ನಾನ ಕಿಳಿದ ಸಂದರ್ಭದಲ್ಲಿ ಮುಳುಗಿದ್ದು, ಸ್ಥಳೀಯರು ಮೇಲಕ್ಕೆತ್ತಲು ಪ್ರಯತ್ನಿಸಿದರೂ ಸಾಧ್ಯ ವಾಗಲಿಲ್ಲ.
ಮಾಹಿತಿ ತಿಳಿದು ಸ್ಥಳಕ್ಕೆ ತಲುಪಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತ ದೇಹವನ್ನು ಮೇಲಕ್ಕೇತ್ತಿದರು.ಆದೂರು ಠಾಣಾ ಪೊಲೀಸರು ಮಹಜರು ನಡೆಸಿದರು. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು,ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಮೃತದೇಹವನ್ನು ನೀಡಲಾಯಿತು.