ಬಂಟ್ವಾಳ, ಮೇ.6(DaijiworldNews/AA): 5ನೇ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಗ್ಲೇಡಿಸ್ ಪಾಯ್ಸ್ ಅವರು ಉದ್ದ ಜಿಗಿತ, ತ್ರಿವಿಧ ಜಿಗಿತ, 100ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಏಪ್ರಿಲ್ 13ರಂದು ಸಿಂಕಂದರಬಾದಲ್ಲಿ 5ನೇ ಹಿರಿಯ ನಾಗರಿಕರ ಕ್ರೀಡಾಕೂಟ ನಡೆದಿದ್ದು, ಇದರಲ್ಲಿ ಬಂಟ್ವಾಳದ ಗ್ಲೇಡಿಸ್ ಪಾಯ್ಸ್ ರವರು ಉದ್ದ ಜಿಗಿತ, ತ್ರಿವಿಧ ಜಿಗಿತ ಹಾಗು 100ಮೀಟರ್ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಜೊತೆಗೆ ಏಪ್ರಿಲ್ 26, 27, 28ರಂದು ಮುಂಬಯಿಯಲ್ಲಿ ನಡೆದ 43ನೇ ಹಿರಿಯರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಉದ್ದ ಜಿಗಿತ, 100 ಮೀಟರ್, 400 ಮೀಟರ್ ಮತ್ತು 800 ಮೀಟರ್ ಓಟ ಹಾಗು 4x100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.