ಉಡುಪಿ, ಮೇ.5(DaijiworldNews/AA): ಕಲ್ಲಿಕೋಟೆಯಿಂದ ಗೋವಾಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಆರೋಗ್ಯವು ರಾತ್ರಿ ಹೊತ್ತಿನಲ್ಲಿ ಹದಗೆಟ್ಟು ಪರಿಸ್ಥಿತಿ ಗಂಭೀರವಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ಉಡುಪಿ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಡೆದಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ರಮೇಶ್ (55) ಅವರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಬಳಿಕ ಈ ವಿಷಯ ತಿಳಿದ ಉಡುಪಿ ಇಂದ್ರಾಳಿಯ ರೈಲು ನಿಲ್ದಾಣದ ಮುಖ್ಯ ಆರೋಗ್ಯಾಧಿಕಾರಿ ಸ್ಟಿವನ್ ಜಾರ್ಜ್ ಅವರು, ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ವಿಷಯ ಮುಟ್ಟಿಸಿದ್ದಾರೆ.
ತಕ್ಷಣ ನೆರವಿಗೆ ಬಂದ ಒಳಕಾಡು ಅವರು ಪ್ರಯಾಣಿಕ ರಮೇಶ್ ಅವರನ್ನು ಮೊದಲು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅಲ್ಲಿಂದ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ. ರಮೇಶ್ ಅವರ ರಕ್ಷಣ ಕಾರ್ಯಚರಣೆಗೆ ಏಕನಾಥ್ ವೈದ್ಯ ಸಹಕರಿಸಿದ್ದಾರೆ.