ಮಂಗಳೂರು, ಮೇ.4(DaijiworldNews/AA): ಮೂಲ್ಕಿ ತಾಲೂಕಿನ ಕೊಲ್ಲೂರಿನ ಶ್ರೀ ಕಾಂತಬಾರೆ - ಬೂದಬಾರೆ ಜನ್ಮಕ್ಷೇತ್ರದ ಜೀವಂತ ಸಾಕ್ಷಿಯಾಗಿದ್ದ ತಾಕೊಡೆ ಮರ ಶುಕ್ರವಾರ ನೆಲಕ್ಕುರುಳಿದೆ.
ಈ ತಾಕೊಡೆ ಮರವು ಸುಮಾರು 800 ರಿಂದ 1000 ವರ್ಷಗಳಷ್ಟು ಹಳೆಯದು ಎಂದು ಅಧ್ಯಯನಗಳು ದೃಢಪಡಿಸಿವೆ.
ಇತಿಹಾಸದ ಪ್ರಕಾರ, ಕಾಂತಬಾರೆ-ಬೂದಬಾರೆ ಅವಳಿಗಳು ಮುಲ್ಕಿ ಸಾವಂತ ರಾಜರ ಹೆಸರಾಂತ ಯೋಧ ಲೆಫ್ಟಿನೆಂಟ್ಗಳಾಗಿದ್ದರು. ಇನ್ನು ದಂತಕಥೆಯ ಪ್ರಕಾರ, ಅವರು ಈ ಮರದ ಕೆಳಗೆ ಜನಿಸಿದರು ಮತ್ತು ಅವರ ಜನನದ ನಂತರ ಅವರನ್ನು ತಾಕೊಡೆ ಮರದ ಕೊಂಬೆಗೆ ತೊಟ್ಟಿಲು ಕಟ್ಟಿ ತೂಗಲಾಗುತ್ತಿತ್ತು.