ಉಡುಪಿ, ಮೇ.3(DaijiworldNews/AK):ಇತ್ತೀಚಿಗೆ ಕೆಲವು ದಿನಗಳಿಂದ ದೇಶದೆಲೆಡೆ ಹರಡಿರುವ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆಗಳನ್ನು, ಸಾರುವ ಪೆನ್ ಡ್ರೈವ್ ಸುದ್ದಿ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದಿರುವಂತಹ ಮಾಜಿ ಪ್ರಧಾನಿಯೊಬ್ಬರ ಮೊಮ್ಮಗ, ಕರ್ನಾಟಕ ದ ಮಾಜಿ ಮುಖ್ಯ ಮಂತ್ರಿಯೊಬ್ಬರ ಆಣ್ಣನ ಮಗ ಮಾಜಿ ಸಚಿವರೊಬ್ಬರ ಮಗ, ಅಷ್ಟೇ ಅಲ್ಲ, ಸ್ವತಃ ಒಬ್ಬ ಸಂಸದ ನಾಗಿರುವ ಪ್ರಜ್ವಲ್ ರೇವಣ್ಣ ತಾನು ಏನು ಮಾಡಿದರೂ ನಡೆಯುತ್ರೆ, ತನ್ನನ್ನು ಯಾರೂ ಏನೂ ಮಾಡಲಾರರು ಎನ್ನುವ ಅಹಂಕಾರದಿಂದ ನೂರಾರು ಸ್ತ್ರೀಯರ ಶೀಲಹರಣ ಮಾಡಿರುವ ವಿಚಾರ ನಮ್ಮ ದೇಶದಲ್ಲಿ ಸಂವಿಧಾನ ಇನ್ನೂ ಇದೆಯಾ ಎನ್ನುವ ಅನುಮಾನ ಮೂಡಿಸುತ್ತದೆ ಮೋದಿ ಪರಿವಾರದೊಂದಿಗೆ ಗುರುತಿಸಿಕೊಂಡಿರುವ ಈ ಚಂಡಾಲನಿಗೆ ಇದೀಗ ಮೋದಿಯವರ ಅಭಯವೂ ಸಿಕ್ಕಿರಬಹುದೆನ್ನುವ ಗುಮಾನಿ ಹುಟ್ಟಿಕೊಂಡಿದೆ" ಎಂದು ಉಡುಪಿ ಮಹಿಳಾ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜ್ವಲ್ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಹಾಸನದ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದರೂ ಬಿಜೆಪಿ ಪಕ್ಷವು ಜೆಡಿಎಸ್ ನೊಂದಿಗಿನ ಮೈತ್ರಿಯನ್ನು ಉಳಿಸಿಕೊಳ್ಳಲು ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸದೇ ಸುಮ್ಮನಿದ್ದುದು ನಮ್ಮ ಗುಮಾನಿಗೆ ಪುತ್ರಿ ನೀಡಿದೆ. ಇಂತಹ ಒಂದು ಕೃತ್ಯವು ಅನ್ಯಕೋಮಿನವರಿಂದ ನಡೆದಿದ್ದರೆ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲಿ.. ಬಿಜೆಪಿ ತನ್ನ ಉಗ್ರ ಸ್ವರೂಪವನ್ನು ತೋರಿಸುತ್ತಿತ್ತು. ಇತ್ತೀಚೆಗೆ ನಡೆದ ನೇಹಾ ಕೊಲೆ ಪ್ರಕರಣವೇ ಇದಕ್ಕೆ ಸಾಕ್ಷಿ.ಮೋದಿ, ಅಮಿತ್ ಷಾ ಆದಿಯಾಗಿ ಬಿಜೆಪಿಯ ಎಲ್ಲಾ.. ನಾಯಕರೂ ಈ ಪ್ರಕರಣವನ್ನು ಎಳೆದು ತರುವ ಪ್ರಯತ್ನವನ್ನು ಮಾಡಿದ್ದರು,ಲೋಕಸಭಾ ಚುನಾವಣೆಗೆ ನೇಹಾ ಪ್ರಕರಣ ಒಂದು ಅಸ್ತ್ರ ವಾಗಿತ್ತು. ಆದರೆ ಇದೀಗ ಬಯಲಿಗೆ ಬಂದಿರುವ ಪ್ರಜ್ವಲ್ ರೇವಣ್ಣ ಅವರ ಈ ಲೈಂಗಿಕ ಹಗರಣದ ಬಗ್ಗೆ, ಬಿಜೆಪಿಯ ಯಾವ ನಾಯಕರೂ ಚಕಾರವೆತ್ತುತ್ತಿಲ್ಲ.. ನೇಹಾ ಕೊಲೆ ನಿಜಕ್ಕೂ ಖಂಡನೀಯ, ಆಕೆಯ ದಾರುಣ ಹತ್ಯೆಗೆ ಕಾರಣನಾದ ಆರೋಪಿಗೆ ಕಠೋರ ಶಿಕ್ಷೆಯಾಗಲೇಬೇಕು ಎನ್ನುವುದು ನಮ್ಮ ಆಶಯ ಎಂದರು.
ಆರೋಪಿ ಯಾವುದೇ ಧರ್ಮದವನಿರಲಿ, ಆತನ ಪರವಹಿಸುವ ಯಾವುದೇ ಮಾತಿಲ್ಲ.. ಆದರೆ ಪ್ರಜ್ವಲ್ ರೇವಣ್ಣ ಎಸಗಿದ ಕೃತ್ಯ ಅತ್ಯಂತ ಕ್ರೂರ ಹಾಗೂ ಅಮಾನವೀಯ, ವಯಸ್ಸಿನ ನಿರ್ಬಂಧವಿಲ್ಲದೇ ನೂರಾರು ಮಹಿಳೆಯರನ್ನು ತನ್ನ ಕಾಮತೃಷೆಗೆ ಉಪಯೋಗಿಸಿಕೊಂಡಿದ್ದು ಸಾಲದೇ ತಾನೇನೋ ಘನಂದಾರಿ ಕಾರ್ಯ ಮಾಡುತ್ತಿದ್ದೇನೆ ಎನ್ನುವಂತೆ ಎಲ್ಲವನ್ನೂ ರೆಕಾರ್ಡ್ ಮಾಡಿಕೊಂಡಿದ್ದು, ಆ ಮಹಿಳೆಯರನ್ನು ಬ್ಲ್ಯಾಕ್ ಮೇಲ್ ಮಾಡುವ ಅಪಾಯಕಾರಿ ಚಿಂತನೆಯನ್ನು ಹೊಂದಿದ್ದನ್ನು ಗಮನಿಸಿದರೆ ಆದೇ ಎಂತಹ ಕ್ರೂರಿ ಎನ್ನುವುದನ್ನು ತೋರಿಸುತ್ತದೆ ಎಂದರು.
ಉಡುಪಿ ಜಿಲ್ಲಾ, ಮಹಿಳಾ ಕಾಂಗ್ರೆಸ್ ಈ ಘಟನೆಯನ್ನು ಬಲವಾಗಿ ಪ್ರತಿಭಟಿಸುತ್ತದೆ.ಹಾಗೂ ಪ್ರಧಾನ ಮಂತ್ರಿಗಳು ಹಾಗೂ ಬಿಜೆಪಿಯ ನಾಯಕರಲ್ಲಿ ನಮ್ಮದೊಂದು ಪ್ರಶ್ನೆ ಇದೆ. ಇಷ್ಟು ದೊಡ್ಡ ಹಗರಣ ನಡೆದ ಮೇಲೂ ಬಿಜೆಪಿ ಪಕ್ಷವು ಜೆಡಿಎಸ್ ಪಕ್ಷವನ್ನು ಇನ್ನೂ ಮೈತ್ರಿ ಯೊಂದಿಗೆ ಆಲಂಗಿಸಿಕೊಂಡು ಮುಂದುವರಿಯಲಿದೆಯೇ?ದೇಶವನ್ನೇ ತಲ್ಲಣಗೊಳಿಸಿದ ಈ ಹಗರಣವು ತಮ್ಮ ಪಕ್ಷದ ಮೇಲೆ ಏನೂ ಪರಿಣಾಮ ಬೀರಿಲ್ಲವೇ?
ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಆರೋಪಿ ಪ್ರಜ್ವಲ್ ರೇವಣ್ಣ ಅವರನ್ನು ಶಿಕ್ಷೆಗೆ ಒಳಪಡಿಸಬೇಕು, ಮಾತ್ರವಲ್ಲ ತನ್ನ ಗುಟ್ಟು ಬಯಲಾದ ತಕ್ಷಣ ಜರ್ಮನಿಗೆ ಪಲಾಯನ ಗೈದಿರುವ ಆತನನ್ನು ತಕ್ಷಣ ಭಾರತಕ್ಕೆ ಬರುವಂತೆ ಆದೇಶ ನೀಡಬೇಕು ಎಂದು ಉಡುಪಿ ಜಿಲ್ಲಾ, ಮಹಿಳಾ ಕಾಂಗ್ರೆಸ್ ವಿನಂತಿಸಿಕೊಳ್ಳುತ್ತದೆ. ಯಾವುದೇ ಕಾರಣಕ್ಕೂ ಅಪರಾಧಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಾಗಬಾರದು. ಆತನಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸೂಕ್ತವಾದ ನ್ಯಾಯ, ಸಿಗುವಂತಾಗಬೇಕು, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸದಾ ಈ ಸಹೋದರಿಯರಿಗೆ ಒತ್ತಾಸೆಯಾಗಿ ನಿಲ್ಲಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೆಲಿಯೋ ಮಾತನಾಡಿ "ಇದು ಮಹಿಳೆಯರು ಖಂಡಿಸಬೇಕಾದ ವಿಚಾರ. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಆಗದೃ ಹೋದಲ್ಲಿ ಯಾವ ಸಂದೇಶ ದೇಶಕ್ಕೆ ನೀಡಿದಂತಾಗುತ್ತದೆ? ಉಡುಪಿ ಪ್ರಕರಣದಲ್ಲಿ ರಾಷ್ಟ್ರ ಮಟ್ಟದ ನಾಯಕರು ಇಲ್ಲಿಗೆ ಬಂದಿದ್ದರು,ಆದರೆ ಬಿಜೆಪಿಗೆ ಈ ಘಟನೆ ಸಣ್ಣ ವಿಚಾರ ವಾಗಿದೆಯೇ? ಎಂದು ಪ್ರಶ್ನಿಸಿದರು.