ಕಾಸರಗೋಡು, ಮೇ.2(DaijiworldNews/AK): ಜಿಲ್ಲೆಯಲ್ಲಿ ಎಲ್ಲರಿಗೂ ಕುಡಿಯುವ ನೀರು ಖಾತರಿ ಪಡಿಸಲು ಸ್ಥಳೀಯಾಡಳಿತ ಸಂಸ್ಥೆ ಗಳ ಕಾರ್ಯದರ್ಶಿ ಗಳಿಗೆ ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ಆದೇಶ ನೀಡಿದ್ದಾರೆ.
ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿರುವ ಹಿನ್ನಲೆಯಲ್ಲಿ ಈ ಬಗ್ಗೆ ಸೂಚನೆ ನೀಡಿದ್ದಾರೆ.ಜಿಲ್ಲಾ ವಿಪತ್ತುನಿವಾರಣಾ ಸಮಿತಿ ಸ್ಥಳೀಯಾಡಳಿತ ಕಾರ್ಯದರ್ಶಿ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಈ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಗಂಭೀರವಾದ ನೀರಿನ ಸಮಸ್ಯೆ ಕಂಡುಬಂದಿಲ್ಲ . ಬಾವಿಕ್ಕರೆ ಕುಡಿಯುವ ನೀರಿನ ಯೋಜನೆಯಲ್ಲಿ ಮೇ ಕೊನೆ ತನಕ ಕುಡಿಯುವ ನೀರು ವಿತರಣೆಗೆ ಲಭ್ಯವಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಸ್ಥಳೀಯ ಮಟ್ಟದಲ್ಲಿ ನೀರು ತುಂಬಿಸಿ ವಿತರಿಸಬೇಕು . ಜಲನಿಧಿ ಯೋಜನೆಯಡಿ ಕೊಳವೆ ಬಾವಿ , ತೆರೆದ ಬಾವಿಗಳನ್ನು ಬಳಸಬೇಕು , ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ವಿಪತ್ತುನಿರ್ವಹಣಾ ವಿಭಾಗದ ಉಸ್ತುವಾರಿಯನ್ನಾಗಿ ಅಶ್ವತಿ ಕೃಷ್ಣ ರವರನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ದಂಡನಾಧಿಕಾರಿ ಕೆ . ವಿ ಶ್ರುತಿ , ನೀರಾವರಿ ಇಲಾಖಾ ಸಹಾಯಕ ಇಂಜಿನಿಯರ್ ಟಿ . ಸಂಜೀವ , ನವಕೇರಳ ಕ್ರಿಯಾ ಸಮಿತಿ ಜಿಲ್ಲಾ ಸಂಯೋಜಕ ಕೆ . ಬಾಲಕೃಷ್ಣನ್ , ಸ್ವಚ್ಛತಾ ಮಿಷನ್ ಜಿಲ್ಲಾ ಸಂಚಾಲಕ ಎ . ಲಕ್ಷ್ಮಿ , ವಿಪತ್ತು ನಿವಾರಣಾ ಪ್ರಾಧಿಕಾರದ ಅಶ್ವತಿ ಕೃಷ್ಣ , ಕೇರಳ ಜಲ ಪ್ರಾಧಿಕಾರ , ಕೆ .ಎಸ್ .ಇ .ಬಿ ಪ್ರತಿನಿಧಿಗಳು ,ಸ್ಥಳೀಯಾಡಳಿತ ಸಂಸ್ಥೆ ಕಾರ್ಯದರ್ಶಿಗಳು ಉಪಸ್ಥಿತರಿದ್ದರು