ಕುಂದಾಪುರ, ಮೇ 06 (Daijiworld News/MSP): ಈ ಪರಿಸರದಲ್ಲಿ ಅದೆಷ್ಟೋ ಯುವಕ ಮಂಡಲಗಳು ಕಾರ್ಯ ನಿರ್ವಹಿಸುತ್ತವೆ ಅವುಗಳು ಒಂದಿಷ್ಟು ಸಮಾಜಮುಖಿ ಚಿಂತನೆಗಳ ಜೊತೆ ವರ್ಷಂಪ್ರತಿ ಸಾಂಸ್ಕ್ರತಿಕ ಕಾರ್ಯಕ್ರಮ,ಅಶಕ್ತರಿಗೆ ಸಹಾಯ,ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತವೆ.ಇವು ಒಂದಡೆಯಾದರೆ ಇಲ್ಲೊಂದು ವಿಶೇಷತೆ ಇದೆ ಅದು ಯುವ ಬ್ರೀಗೆಡ್ ಸಂಘಟನೆ ಕಟ್ಟಿಕೊಂಡು ವಿಶೇಷವಾಗಿ ಪುರಾಣ ಪ್ರಸಿದ್ಧ ಕೆರೆಗಳಿಗೆ ಕಾಯಕಲ್ಪ ನೀಡಲು ಮುಂದಾಗಿದ್ದಾರೆ.ಸುಮಾರು ನಲವತ್ತರಿಂದ ಐವತ್ತು ಕುಂದಾಪುರ ಬ್ರೀಗೆಡ್ ಕಾರ್ಯಕರ್ತರು ಈ ಕರೆಯ ಸ್ವಚ್ಛತೆಯ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಭಾನುವಾರ ಗುಂಡ್ಮಿಯ ಮೂಡಹಡು ಯಡಬೆಟ್ಟು ಪರಿಸರದ ರಾಷ್ಟ್ರೀಯ ಹೆದ್ದಾರಿ ತಾಗಿಕೊಂಡಿರುವ ವಿನಾಯಕ ದೇವಸ್ಥಾನದ ಕಲ್ಯಾಣಿ ಕೆರೆ ಹೂಳು ತುಂಬಿರುವುದನ್ನು ಕಂಡು ಭಾನುವಾರ ಪೂರ್ವಾಹ್ನ 6 ಗಂ.ಯಿಂದ ಆರಂಭಿಸಿ ಸುಡು ಬಿಸಿಲೆನ್ನದೆ ಹೂಳೆತ್ತುವ ಕಾರ್ಯದಲ್ಲಿ ತೋಡಗಿಕೊಂಡಿದ್ದಾರೆ.ಇದಕ್ಕೆ ದೇವಳದ ಆಡಳಿತ ಮಂಡಳಿಯ ಪ್ರಮುಖರಾದ ವೈ ಸುಬ್ರಹ್ಮಣ್ಯ ಐತಾಳ್ ,ಬ್ರೀಗೆಡ್ ನ ಪ್ರಮುಖ ನಿರಂಜನ್ ತಲ್ಲೂರು ನೇತ್ರತ್ವ ವಹಿಸಿದರು.
ಕೆರೆಯ ಬಗ್ಗೆ ನಿರ್ಲಕ್ಷ ವಹಿಸಿದ ಪಂಚಾಯತ್
ಹೆಚ್ಚಿನ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕೆರೆಗಳಿವೆ ಅಂಥಹ ಕೆರೆಗಳ ಬಗ್ಗೆ ಸ್ಥಳೀಯ ಪಂಚಾಯತ್ ಗಳು ಮುತುವರ್ಜಿ ಶೂನ್ಯ ಎನ್ನಬಹುದು.
ಸಾಮಾನ್ಯವಾಗಿ ಇಂದು ಅಂತರ್ಜಲದ ವೃದ್ಧಿಗೆ ಕೆರೆಗಳು ಪೂರಕ ಆದರೆ ಆ ಕೆರೆಯ ಬಗ್ಗೆ ಜನ ನಿರ್ಲಕ್ಷ ವಹಿಸುತ್ತಿರುವುದು ಅಷ್ಟೆ ಸತ್ಯ ಆದರೆ ಗ್ರಾಮದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾದ ಪಂಚಾಯತ್ ನಿರ್ಲಕ್ಷ ವಹಿಸಿತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಒಂದು ಇತಿಹಾಸ ಪುರಾಣ ಪ್ರಸಿದ್ಧ ಕರೆ ಹೊಳೆತ್ತುವುದಕ್ಕೆ ಹೊರ ಊರಿನ ಸ್ವಯಂ ಸೇವಕರು ಅಣಿಯಾಗಿದ್ದಾರೆ ಹಾಗಾದರೆ ಪಂಚಾಯತ್ ತಮ್ಮ ವ್ಯಾಪ್ತಿಯ ಕೆರೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರಯವುದಕ್ಕೆ ಬೇಸರ ಸಂಗತಿಯಾಗಿದೆ.