ಮಂಗಳೂರು/ಉಡುಪಿ , ಏ. 26(DaijiworldNews/AK): ಉಡುಪಿ - ಚಿಕ್ಕಮಗಳೂರು ಜಿಲ್ಲೆ ಲೋಕಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆಯವರೆಗೆ 72.13% ಪ್ರತಿಶತ ಮತದಾರರು ಮತ ಚಲಾಯಿಸಿದ್ದಾರೆ.ದ.ಕ.ದಲ್ಲಿ 71.83% ಮತದಾನವಾಗಿದೆ
3.00 ಮಧ್ಯಾಹ್ನ- 57.49% ಮತದಾನ ಉಡುಪಿ- ಚಿಕ್ಕಮಗಳೂರು (ಕಾರ್ಕಳ 59.48%, ಕಾಪು 60.24%, ಕುಂದಾಪುರ 59.44%, ಚಿಕ್ಕಮಗಳೂರು 52.37%, ಮೂಡಿಗೆರೆ 57.92%, ಶೃಂಗೇರಿ 5% ಮತ್ತು ತರೀಕೆರೆ 58.64%) ಮತದಾನವಾಗಿದೆ. ಬಂಜಾರು ಮಲೈ 100% ಮತದಾನವಾಗಿದೆ.
ಬೆಳಿಗ್ಗೆಯಿಂದಲೇ ಮತದಾರರು ತಮ್ಮ ತಮ್ಮ ಮತಗಟ್ಟೆಗಳಿಗೆ ಬಂದು ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸುತ್ತಿದ್ದಾರೆ, ಸುಡು ಬಿಸಿಲನ್ನು ಲೆಕ್ಕಿಸದೆ ಮತದಾರರು ಮತಗಟ್ಟೆಗಳತ್ತ ಹೆಜ್ಜೆ ಹಾಕಿದ್ದಾರೆ.ಬೆಳಿಗ್ಗೆಯಿಂದಲೇ ಮತದಾರರು ತಮ್ಮ ತಮ್ಮ ಮತಗಟ್ಟೆಗಳಿಗೆ ಬಂದು ತಮ್ಮ ಅಮೂಲ್ಯ ಮತಗಳನ್ನು ಚಲಾಯಿಸುತ್ತಿದ್ದಾರೆ. ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ತೆರಳಿ ಮತ ಚಲಯಿಸುತ್ತಿರುವುದು ಕಂಡು ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಎಂಬಂತೆ ಶೇ.100 ಮತದಾನ ಮಾಡುವ ಮೂಲಕ ನಕ್ಸಲ್ ಕೇಂದ್ರಿತ ಬಾಂಜಾರುಮಲೆ ದಾಖಲೆ ನಿರ್ಮಿಸಿದೆ.
ಮತಗಟ್ಟೆ ಸಂಖ್ಯೆ 86 ರ ಸಮುದಾಯ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ.
ಈ ಬಾರಿ ಜಿಲ್ಲಾ ಸ್ವೀ ಪ್ ಸಮಿತಿ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕಿನ ಸ್ವೀ ಪ್ ಸಮಿತಿ ಅಧ್ಯಕ್ಷ ವೈಜಣ್ಣ ಹಾಗೂ ತಂಡ ಶೇ.100 ಮತದಾನ ಮಾಡುವಂತೆ ಊರ ಜನರಲ್ಲಿ ಜಾಗೃತಿ ಮೂಡಿಸಿತ್ತು. ಶೇ. 100 ಮತದಾನವಾದಲ್ಲಿ ದ.ಕ.ಜಿಲ್ಲಾಧಿಕಾರಿಗಳು ವಿಶೇಷ ಬಹುಮಾನವನ್ನು ಘೋಷಿಸಿದ್ದರು. ಶೇ.100 ಮತದಾನದ ಹಿನ್ನೆಲೆ ತಾಲೂಕು ಸ್ವೀ ಪ್ ಸಮಿತಿ ಅಧ್ಯಕ್ಷ ವೈಜಣ್ಣ ಸೇರಿದಂತೆ ಸಿಬಂದಿ ಊರಿನ ಮಂದಿಗೆ ಪುಷ್ಪ ನೀಡಿ ಅಭಿನಂದಿಸಿದ್ದಾರೆ.