ಬಂಟ್ವಾಳ, ಏ.26(DaijiworldNews/AA): ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಆರಂಭಗೊಂಡಿದ್ದು, ಮದುಮಗಳೊಬ್ಬಳು ಸಪ್ತಪದಿ ತುಳಿಯುವ ಮುನ್ನ ಮತ ಚಲಾವಣೆ ಮಾಡಿದ ಘಟನೆ ಬಂಟ್ವಾಳ ತಾಲೂಕು ವೀರಕಂಬ ಗ್ರಾಮದಲ್ಲಿ ನಡೆದಿದೆ.
ವೀರಕಂಬ ಗ್ರಾಮದ ಗಣೇಶ್ ನಿಲಯ ಕಮಲಾಕ್ಷ ಪೂಜಾರಿಯವರ ದ್ವಿತೀಯ ಪುತ್ರಿ ವಿನುತಾ ಮತ ಚಲಾಯಿಸಿದವರು.
ವೀರಕಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ಇಲ್ಲಿನ ಮತ ಕೇಂದ್ರ ಸಂಖ್ಯೆ 203 ರಲ್ಲಿ ವಿನುತಾ ಅವರು ತನ್ನ ವಿವಾಹಕ್ಕೂ ಮೊದಲು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.