ಕಾಸರಗೋಡು , ಏ 25 (DaijiworldNews/MS): ಏಪ್ರಿಲ್ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಾ ಅಬ್ಬರದ ಪ್ರಚಾರಕ್ಕೆ ಬುಧವಾರ ಸಂಜೆ ತೆರೆಬಿತ್ತು. 26 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರ ತನಕ ಮತದಾನ ನಡೆಯಲಿದೆ. 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 14, 52, 230 ಮತದಾರರಿದ್ದಾರೆ. 7, 01, 475 ಪುರುಷರು , 7, 50 , 741 ಮಹಿಳಾ ಮತದಾರರಿದ್ದಾರೆ.
17 ಮಂಗಳ ಮುಖಿ ಮತದಾರರನ್ನು ಹೊಂದಿದ್ದಾರೆ.ಮನೆಯಲ್ಲೇ ಮತದಾರರ ಪೈಕಿ 5331ಮಠಗಳು ಚಲಾವಣೆ ಮಾಡಿದ್ದಾರೆ.
ನಾಳೆ ನಡೆಯಲಿರುವ ಚುನಾವಣೆಗೆ ನಡೆಯುವ ಒಟ್ಟು 1334 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಮಂಜೇಶ್ವರ 205, ಕಾಸರಗೋಡು 190 , ಉದುಮ 198 , ಕಾಞ೦ಗಾಡ್ 196 , ತ್ರಿಕ್ಕರಿಪುರ 194 , ಪಯ್ಯನ್ನೂರು 181 ಹಾಗೂ ಕಲ್ಯಾಶ್ಯೇರಿ 170 ಮತಗಟ್ಟೆಗಳಿವೆ.
ಮತಗಟ್ಟೆಗಳಿಗಿರುವ ಸಾಮಾಗ್ರಿಗಳ ವಿತರಣೆ ಏಪ್ರಿಲ್ 25 ರಂದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕೇಂದ್ರಗಳಲ್ಲಿ ವಿತರಿಸಲಾಗುವುದು. ಮಂಜೇಶ್ವರ - ಜಿ . ಎಚ್. ಎಸ್ ಶಾಲೆ ಕುಂಬಳೆ , ಕಾಸರಗೋಡು - ಕಾಸರಗೋಡು ಸರಕಾರಿ ಕಾಲೇಜು , ಉದುಮ - ಚೆಮ್ನಾದ್ ಜಮಾ ಅತ್ ಹಯರ್ ಸೆಕಂಡರಿ ಶಾಲೆ , ಕಾ ಞ೦ಗಾಡ್ - ತ್ರಿಕ್ಕರಿಪುರ ಸ್ವಾಮಿ ನಿತ್ಯಾನಂದ ಇಂಗ್ಲೀಷ್ ಮೀಡಿಯಂ ಶಾಲೆ , ಪಯ್ಯನ್ನೂರು - ಎ - ಕು೦ಞ ರಾಮನ್ ಆಡಿಯೋದಿ ಸ್ಮಾರಕ ಜಿ ವಿ ಎಚ್ ಎಸ ಶಾಲೆ ಪಯ್ಯನ್ನೂರು , ಕಲ್ಯಾಶ್ಯೇರಿ -- ಸರಕಾರಿ ಹಯರ್ ಸೆಕಂಡರಿ ಶಾಲೆ ಮಾಡಾಯಿ ಯಲ್ಲಿ ಸಾಮಾಗ್ರಿಗಳ ವಿತರಣೆ ನಡೆಯಲಿದೆ. ಚುನಾವಾಣಾ ಕರ್ತವ್ಯಜ್ಜೆ ೪, ೫೬೧ ಸಿಬಂದಿಗಳನ್ನು ನೇಮಿಸಲಾಗಿದೆ.