ಕಾಸರಗೋಡು, ಏ. 24(DaijiworldNews/AK):ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಶಾಂತಿ - ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗಳಲ್ಲಿ ಏಪ್ರಿಲ್ 24 ( ಇಂದು) ಸಂಜೆ ಆರರಿಂದ 27 ಸಂಜೆ ಆರು ಗಂಟೆ ತನಕ ನಿಷೇಧಾಜ್ಞೆವಿಧಿಸಿ ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ಆದೇಶ ನೀಡಿದ್ದಾರೆ.
ಸಾರ್ವಜನಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಐದಕ್ಕೂ ಹೆಚ್ಚು ಮಂದಿ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಮನೆ ಮನೆಗಳಿಗೆ ತರಲಿ ಅಭ್ಯರ್ಥಿಗಳಿಗೆ ಮತ ಯಾಚಿಸಲು ಅವಕಾಶ ವಿದೆ ಮೆಡಿಕಲ್ ಎಮರ್ಜನ್ಸಿ , ಕಾನೂನು ಪರಿಪಾಲನೆ , ಅಗ್ನಿಶಾಮಕ ದಳ , ಸರಕಾರಿ ಸೇವೆಗಳ ಚಟುವಟಿಕೆ ಮೊದಲಾದವುಗಳಿಗೆ ವಿನಾಯಿತಿ ನೀಡಲಾಗಿದೆ. ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ