ಕುಡುಪು, ಏ. 24(DaijiworldNews/AK):ಫ್ರೆಂಡ್ಸ್ ಬಳ್ಳಾಲ್ಬಾಗ್ ಬಿರುವೆರ್ ಕುಡ್ಲ ಇದರ ಮಹಾಸೇವಾ ಯೋಜನೆಯ ಅಡಿಯಲ್ಲಿ ಕುಡುಪು ತಿರುವೈಲು ಗ್ರಾಮದ ಆರ್ಥಿಕವಾಗಿ ಹಿಂದುಳಿದ ತುಕಾರಾಮ ದೇವಾಡಿಗ ದಂಪತಿಗಳಿಗೆ 12 ಲಕ್ಷ ರೂ.ವೆಚ್ಚದಲ್ಲಿ ಹೊಸ ಮನೆ ನಿರ್ಮಿಸಿದ್ದು ಇದರ ಹಸ್ತಾಂತರ ಸಮಾರಂಭ ಬುಧವಾರ ನಡೆಯಿತು.
ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀರಾಜಶೇಖರಾನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಬಿರುವೆರ್ ಕುಡ್ಲದ ಯುವ ಜನತೆಯ ಸಮೂಹವು ಬಡವರ್ಗಕ್ಕೆ ಮಾಡುತ್ತಿರುವ ಸಹಾಯ ಸಣ್ಣದೇನಲ್ಲ. 9 ಮನೆಗಳ ನಿರ್ಮಾಣಕ್ಕೆ ಕೋಟಿ ವೆಚ್ಚವಾಗುತ್ತದೆ. ಇದರ ಜತೆಗೆ ನೆರವಿಗಾಗಿ ಕೋಟ್ಯಾಂತರ ಧನಸಹಾಯ ಮಾಡುತ್ತಾ ಬಂದಿದ್ದಾರೆ. ದಾನಿಗಳ ನೆರವು, ಸಂಘಟನೆಯ ಯುವ ಜನರ ಪರಿಶ್ರಮ ನೋಡುವಾಗ ಮನತುಂಬಿ ಬರುತ್ತದೆ. ಇವರಿಗೆ ದೇವರ ಆಶೀರ್ವಾದ ಸದಾ ಇರಲಿ ಎಂದರು.
ಮನೆ ಹಸ್ತಾಂತರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಆವರು ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶದಂತೆ ಬಡವರ್ಗದ ಕಣ್ಣೀರು ಒರೆಸುವ ಕಾಯಕವನ್ನು ಈ ಸಂಘಟನೆ ನಿರಂತರವಾಗಿ ಮಾಡುತ್ತಾ ಬರುತ್ತಿದೆ.ಸರಕಾರ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಇವರು ಸಂಘಟನಾತ್ಮಕವಾಗಿ ಮಾಡುವ ಮೂಲಕ ಕಣ್ತೆರೆಸುವ ಕೆಲಸ ಮಾಡುತ್ತಿದ್ದಾರೆ.9 ಮನೆ, ಚಿಕಿತ್ಸೆಗಾಗಿ ನೆರವಾಗುವ ನಿಟ್ಟಿನಲ್ಲಿ ಕನಿಷ್ಟ ಎಂಟತ್ತು ಕೋಟಿ ರೂ.ಗಳ ಹಣಕಾಸಿನ ಸಹಾಯಧನ ವಿತರಣೆ ಶ್ಲಾಘನೀಯ ಎಂದರು.
ವಿಧಾನ ಸಭಾಅಧ್ಯಕ್ಷ ಯು.ಟಿ ಖಾದರ್ ಅವರು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಪೂಜಾರಿ ನೇತೃತ್ವದಲ್ಲಿ ನಡೆಯುತ್ತಿರುವ ಸಮಾಜಮುಖೀ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಶಾಸಕರಾದ ಡಾ.ಭರತ್ ಶೆಟ್ಟಿ ವೈ, ವೇದವ್ಯಾಸ ಕಾಮತ್, ಚಿತ್ರನಟ ರೂಪೇಶ್ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್ ಸಾಯೀರಾಮ್ ಶುಭಹಾರೈಸಿದರು.
ಮನಪಾ ಸದಸ್ಯರಾದ ಭಾಸ್ಕರ ಮೊಯಿಲಿ, ಸಂಗೀತಾ ನಾಯಕ್,ಪ್ರಮುಖರಾದ ರಣದೀಪ್ ಕಾಂಚನ್,ಡಾ.ಶಿವಶರಣ್ ಶೆಟ್ಟಿ, ಉದ್ಯಮಿ ಲತೀಶ್ ಪೂಜಾರಿ,ವಿದ್ಯಾರಾಕೇಶ್, ಉದ್ಯಮಿ ಜಿತೇಶ್ ಜೈನ್,ದರ್ಶನ್ ಜೈನ್, ಚಂದನ್ದಾಸ್, ಸ್ಥಾಪಕ ಅಧ್ಯಕ್ಷ ಉದಯಪೂಜಾರಿ ಬಳ್ಳಾಲ್ಬಾಗ್, ಅಧ್ಯಕ್ಷ ರಾಕೇಶ್ ಬಳ್ಳಾಲ್ಬಾಗ್,ವಸಂತ್ ಜೆ ಪೂಜಾರಿ,ಧನ್ ರಾಜ್ ಪೂಜಾರಿ,ರಾಕೇಶ್ ಚಿಲಿಂಬಿ,ಲೋಹಿತ್ ಗಟ್ಟಿ,ರಾಮ್ ಎಕ್ಕೂರು,ಮನೋಜ್ ಶೆಟ್ಟಿ, ಗಣೇಶ್ ಚಿಲಿಂಬಿ, ಬತ್ತೇರಿ ಫ್ರೆಂಡ್ಸ್,ಗಿರೀಶ್ ಬತ್ತೇರಿ,ಗೌತಮ್ ಬತ್ತೇರಿ,ರಾಜೇಶ್ ಉರ್ವ, ಕಿರಣ್ ಶೆಟ್ಟಿ, ಸಾಗರ್ ಅಶೋಕ ನಗರ, ಸುನಿಲ್ ಚೆಟ್ಟಿಯಾರ್,ದೇವದಾಸ್ ಶೆಟ್ಟಿ, ಸುನಿಲ್ ಶೆಟ್ಟಿ ಬಳ್ಳಾಲ್ ಬಾಗ್,ಕಿಶೋರ್ ಬಾಬು, ಪ್ರೀತಮ್ ಶೆಟ್ಟಿ, ಅಮಿತ್ ರಾಜ್ ಊರ್ವಸ್ಟೋರ್,ಅಶ್ವಿತ್ ಚಿಲಿಂಬಿ, ಪ್ರಶಾಂತ್, ದೀಕ್ಷಿತ್ ಅತ್ತಾವರ,ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲದ ಎಲ್ಲಾ ಘಟಕದ ಅಧ್ಯಕ್ಷರು ಮತ್ತು ಸರ್ವ ಪದಾ„ಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.