ಉಡುಪಿ,ಏ. 23(DaijiworldNews/AK): ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ದಿಂದನಗರದ ಪ್ರಮುಖ ಸ್ಥಳಗಳಲ್ಲಿ ಪೋಸ್ಟರ್ ಅಭಿಯಾನ ಆರಂಬಿಸಿದ್ದರು.ಆದರೆಯಾವುದೇ ಪರವಾನಿಗೆ ಪಡೆಯದೆ ಬಿಜೆಪಿ ಯುವಮೋರ್ಚಾ
ಪೋಸ್ಟರ್ ಗಳನ್ನ ಅಂಟಿಸಿರುವುದನ್ನು ಅಧಿಕಾರಿಗಳು, ಪೊಲೀಸರು ತೆರವುಗೊಳಿಸಿದ್ದಾರೆ.ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಅಧಿಕಾರಿಯಿಂದ ಪೂರ್ವಾನುಮತಿಯನ್ನು ಪಡೆಯದೆ ಹಾಗೂ ಕರಪತ್ರದಲ್ಲಿ ಮುದ್ರಣ ಕುರಿತು ಪ್ರಕಾಶಕರ ವಿವರ ನಮೂದಿಸದೇ ಪೋಸ್ಟರ್ ಅಭಿಯಾನ ನಡೆಸಿದ ಬಿಜೆಪಿ ಯುವ ಮೋರ್ಚಾದ ಮುಖಂಡರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಯುವ ಮೋರ್ಚಾದ ವತಿಯಿಂದ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಭಿಯಾನವನ್ನು ನಗರದಲ್ಲಿ ಎ.23ರಂದು ಹಮ್ಮಿಕೊಳ್ಳಲಾಗಿತ್ತು. ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್ ಕಂಬಗಳಿಗೆ ಹಾಗೂ ಕರಾವಳಿ ಬೈಪಾಸ್ ನಅಂಡರ್ ಪಾಸ್ ಗಳ ಗೋಡೆಯ ಮೇಲೆ ಕಾರ್ಯಕರ್ತರು ಪೋಸ್ಟರ್ ಗಳನ್ನು ಅಂಟಿಸಿದ್ದರು.
ಇದೀಗ ನಗರದ ಪ್ರಮುಖ ಜಂಕ್ಷನ್ ಗಳಲ್ಲಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಸರ್ಕಾರಿ ಬಸ್ ಗಳಿಗೆ ಪೋಸ್ಟರ್ ಅಂಟಿಸಿದ್ದ ಪೋಸ್ಟರ್ ಗಳನ್ನು ಚುನಾವಣಾ ಅಧಿಕಾರಿಗಳು
ತೆರವುಗೊಳಿಸಿದರು.