ಮುಲ್ಕಿ, ನ 20: ಕರಾವಳಿ ಭಾಗದಲ್ಲಿ ಕ್ರೈಸ್ತ ಸಮುದಾಯವು ಶಿಕ್ಷಣ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ಸಾಮಾಜಿಕ ಬದ್ಧತೆಗೆ ನೀಡಿರುವ ಕೊಡುಗೆ ಪ್ರಶಂಸನೀಯವಾಗಿದೆ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಕಿನ್ನಿಗೋಳಿ ಬಳಿಯ ನವೀಕರಣಗೊಂಡ ದಾಮಸ್ಕಟ್ಟೆ ಚರ್ಚ್ನ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮರಸ್ಯದ ಬದುಕಿನಿಂದ ಸಮಾಜದಲ್ಲಿ ಉತ್ತಮ ಸಂದೇಶವನ್ನು ನೀಡಬಹುದು ಎಂದು ತೋರಿಸಿಕೊಟ್ಟಿರುವ ಕ್ರೈಸ್ತ ಬಾಂಧವರ ಧಾರ್ಮಿಕ ಕ್ಷೇತ್ರಕ್ಕೆ ಸರಕಾರದಿಂದ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಮಂಗಳೂರಿನ ಬಿಷಪ್ ರೆ.ಫಾ. ಡಾ.ಅಲೋಶಿಯಸ್ ಪೌಲ್ ಡಿಸೋಜಾ ಅಧ್ಯಕ್ಷತೆಯನ್ನು ವಹಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ಧಾರ್ಮಿಕ ಕ್ಷೇತ್ರಗಳ ಪ್ರಮುಖರು ಪ್ರಯತ್ನ ನಡೆಸಬೇಕು. ದುರ್ಬಲರಿಗೆ ಆಸರೆಯಾಗಿ, ಶಿಕ್ಷಣ ಆರೋಗ್ಯ ಸಾಮಾಜಿಕ ಸ್ಪಂದನೆಯ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ಗುಲ್ಪರ್ಬ ಬಿಷಪ್ ರೆ. ಫಾ.ಡಾ.ರಾಬರ್ಟ್ ಮಿರಾಂದ ಶುಭ ಹಾರೈಸಿದರು. ಮಂಗಳೂರು ಶಾಸಕ ಜೆ.ಆರ್.ಲೋಬೋ, ಕಿನ್ನಿಗೋಳಿ ಚರ್ಚ್ನ ರೆ.ಫಾ.ವಿನ್ಸೆಂಟ್ ಮೊಂತೆರೋ, ಐಕಳ ಗ್ರಾಮ ಪಂಚಾಯತ್ನ ಅಧ್ಯಕ್ಷ ದಿವಾಕರ ಚೌಟ, ದಾಮಸ್ ಕಟ್ಟೆ ಚರ್ಚ್ನ ರೆ.ಫಾ.ವಿಕ್ಟರ್ ಡಿ ಮೆಲ್ಲೋ, ಫಾ.ಜಯಪ್ರಕಾಶ್ ಡಿಸೋಜಾ, ಬರ್ಟ್ನ್ ಸಿಕ್ವೇರಾ, ಅನಿತಾ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.