ಕಾಸರಗೋಡು, ಏ.22(DaijiworldNews/AK): ಮನೆಯೊಂದು ಬೆಂಕಿಗೆ ಅಹುತಿಯಾದ ಘಟನೆ ಪೆರ್ಲ ಸಮೀಪದ ಶೇಣಿ ಬಾರೆದಳ ಎಂಬಲ್ಲಿ ಸೋಮವಾರ ನಡೆದಿದೆ.
ಬಟ್ಯ ನಾಯ್ಕ ಎಂಬವರ ಹೆಂಚು ಹಾಸಿದ ಮನೆ ಸೋಮವಾರ ಮಧ್ಯಾಹ್ನ ಬೆಂಕಿ ಹಿಡಿದು ಅಪಾರ ನಾಶ ನಷ್ಟ ಉಂಟಾಗಿದೆ. ಘಟನೆ ನಡೆದಾಗ ಬಟ್ಯ ನಾಯ್ಕ ಮತ್ತು ಮಗನ ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಹೊರಗಡೆ ಓಡಿದರಿಂದ ಅಪಾಯ ತಪ್ಪಿದೆ ಎನ್ನಬಹುದು.
ಪತ್ನಿ ಸಮೀಪದ ಹಾಲಿನ ಡೈರಿಗೆ ತೆರಳಿದ್ದು, ಈ ಸಂದರ್ಭದಲ್ಲಿ ಅಡುಗೆ ಕೋಣೆ ಯಿಂದ ಬೆಂಕಿ ತಗಲಿರುವುದಾಗಿ ಶಂಕಿಸಲಾಗಿದೆ. ಮನೆಯೊಳಗಿದ್ದ ಬೆಲೆ ಬಾಳುವ ವಸ್ತು, ನಗದು, ದಾಖಲೆ ಗಳು, ಇಲೆಕ್ಟ್ರಾನಿಕ್ಸ್ ಉಪಕರಣ ಗಳು ಬೆಂಕಿಗೆ ಅಹುತಿಯಾಗಿದೆ.ಮನೆಯ ಗೋಡೆಗಳು ಬಿರುಕು ಬಿಟ್ಟಿದೆ. ಕಾಸರ ಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅಪಾಯ ತಪ್ಪಿಸಿದರು.
ಎಣ್ಮಕಜೆ ಗ್ರಾಮ ಪಂಚಾಯಗೆತು ಅಧ್ಯಕ್ಷ ಸೋಮಶೇಖರ್ ಸ್ಥಳಕ್ಕೆ ಆಗಮಿಸಿ ಸ್ಥಳೀಯವರೊಂದಿಗೆ ಸೇರಿಕೊಂಡು ಈ ಮನೆಯವರಿಗೆ ವಾಸಿಸಲು ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.