ಉಳ್ಳಾಲ, ಏ.22(DaijiworldNews/AK): ದ.ಕ ಜಿಲ್ಲಾ ಅಹಿಂದ ಒಕ್ಕೂಟ ಲೋಕಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗದ ಪದ್ಮರಾಜ್ ಪೂಜಾರಿ ಅವರಿಗೆ ಬೆಂಬಲ ಸೂಚಿಸುತ್ತದೆ.ಶೈಕ್ಷಣಿ ಕ, ಸಾಮಾಜಿಕ, ಆರ್ಥಿಕವಾಗಿ ಜಿಲ್ಲೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಚಿಂತನೆಯಲ್ಲಿರುವ ಅಭ್ಯರ್ಥಿ. ಹಿಂದುಳಿದ ವರ್ಗಕ್ಕೆ ಸೇರಿದವರು. ಸಾಮಾಜಿಕ ನ್ಯಾಯ ಕಲ್ಪಿಸಿದ ಅಭ್ಯರ್ಥಿಯೂ ಹೌದು ಎಂದು ಅಹಿಂದ ಒಕ್ಕೂಟ ದ.ಕ ಜಿಲ್ಲಾಧ್ಯಕ್ಷ ಬಾದ್ ಷಾ ಸಾಂಬರುತೋಟ ಹೇಳಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು,ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ, ದಲಿತರ ಏಳಿಗೆಗಾಗಿ ಅಹಿಂದ ಒಕ್ಕೂಟವನ್ನು ಸಿದ್ಧರಾಮಯ್ಯನವರು 2005 ರಲ್ಲಿ ಅಸ್ತಿತ್ವಕ್ಕೆ ತಂದಿದ್ದಾರೆ.
ಸಮಾಜದಲ್ಲಿ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರನ್ನು ಮುಖ್ಯ ಅಂಗಕ್ಕೆ ತರಬೇಕು ಅನ್ನುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಅಹಿಂದ ರಾಜ್ಯದಲ್ಲೇ ಬಲಿಷ್ಠ ಒಕ್ಕೂಟ ಹಾಗೂ ಚಳುವಳಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಾಮಾಜಿಕ ನ್ಯಾಯ, ಸರಕಾರಿ ಯೋಜನೆಗಳು, ಸರಕಾರದ ಸವಲತ್ತುಗಳು, ರಾಜಕೀಯದಲ್ಲಿ ಅಸ್ತಿತ್ವ ತರುವ ಪ್ರಯತ್ನದಲ್ಲಿ ಅಹಿಂದ ಇದ್ದು, ಈ ನಿಟ್ಟಿನಲ್ಲಿ ಕಾಂತರಾಜು ವರದಿ ಜಾರಿಗೆ ತರಲಾಗಿತ್ತು. ಈ ಮೂಲಕ ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಮುನ್ನೆಲೆಗೆ ತರಲು ಸಹಕಾರಿಯಾಗಿದೆ. ಇದೇ ಉದ್ದೇಶದಿಂದ ರಾಜ್ಯದಾದ್ಯಂತ ಅಹಿಂದ ಒಕ್ಕೂಟ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲವನ್ನು ಸೂಚಿಸುತ್ತಿದ್ದು, ಜಿಲ್ಲೆಯಲ್ಲಿ ಪದ್ಮರಾಜ್ ಪೂಜಾರಿ ಅವರನ್ನು ಬೆಂಬಲಿಸಲಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ಅಚ್ವುತ್ತ ಗಟ್ಟಿ ಮಾತನಾಡಿ, ಅಹಿಂದ ನಾಯಕರಲ್ಲಿ ದೇವರಾಜ್ ಅರಸ್ ಪ್ರಬಲವಾಗಿ ಕಾರ್ಯನಿರ್ವಹಿಸಿದ್ದರೆ, ಜನಾರ್ದನ ಪೂಜಾರಿಯವರು ಬ್ಯಾಂಕ್ ತಟ್ಟುವ ಕಾರ್ಯ, ವೀರಪ್ಪ ಮೊಯ್ಲಿ ಸಿಇಟಿ ಜಾರಿಗೆ ತರುಳದ್ದಾರೆ. ಇಡೀ ದೇಶದಲ್ಲಿ ಶೇ.80 ಹಿಂದುಳಿದ ವರ್ಗದವರು ಇದ್ದರೂ ಸಂವಿಧಾನಬದ್ಧ ನ್ಯಾಯ ಇನ್ನೂ ಸಿಕ್ಕಿಲ್ಲ. ಕೇವಲ 15% ಇರುವ ಮೇಲ್ವರ್ಗದವರು ಈಗಲೂ ಆಡಳಿತ ನಡೆಸುತ್ತಿದ್ದಾರೆ. ಪ್ರತಿ ಪಕ್ಷದ ಆಡಳಿತದಲ್ಲೂ ನ್ಯಾಯ ಸಿಕ್ಕಿಲ್ಲ. ಸಿದ್ದರಾಮಯ್ಯನವರು ಆರಂಭಿಸಿದ ಅಹಿಂದ ಒಕ್ಕೂಟ ರಾಜ್ಯದಲ್ಲೇ ಪ್ರಚಲಿತದಲ್ಲಿದೆ. ದೇಶದಲ್ಲೇ ಪ್ರಬಲ ಅಹಿಂದ ನಾಯಕರಾಗಿ ಸಿದ್ದರಾಮಯ್ಯನವರು ಹೊರಹೊಮ್ಮಿದ್ದು, ಅವರಿಗೆ ರಾಷ್ಟ್ರನಾಯಕರಾಗುವ ವ್ಯಕ್ತಿತ್ವ ಇದೆ. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ನಿಷ್ಠಾವಂತ , ಪ್ರಾಮಾಣಿಕ ವ್ಯಕ್ತಿತ್ವದ ರಾಜಕಾರಣಿ ಆಗಿದ್ದು, ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಪಕ್ಷ ಎಂದು ಹೇಳುತ್ತಾ ಬರುವವರು ಕಾಂಗ್ರೆಸ್ ನಲ್ಲಿ 126 ಹಿಂದುಗಳು ಶಾಸಕರಿದ್ದಾರೆ ಅನ್ನುವುದನ್ನು ಗಮನದಲ್ಲಿರಿಸಬೇಕು. ಪದ್ಮರಾಜ್ ಪೂಜಾರಿ ಅವರು ಹಿಂದುಳಿದ ವರ್ಗದವರಿಗೆ ಬೆಳದಿಂಗಳು ಅನ್ನುವ ಸಂಘಟನೆ ಮೂಲಕ ಹಿಂದುಳಿದ ವರ್ಗದವರಿಗೆ ಮನೆ, ರೋಗಿಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತಾ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದವರು ಎಂದರು.
ಈ ಸಂದರ್ಭ ಪುತ್ತೂರು ತಾಲೂಕು ಅಹಿಂದ ಅಧ್ಯಕ್ಷ ಪ್ರಹ್ಲಾದ್, ಮಂಗಳೂರು ನಗರ ಅಧ್ಯಕ್ಷೆ ಮೇರಿ ಸಾಂತಿಸ್,ಉಳ್ಳಾಲ ತಾಲೂಕು ಇಬ್ರಾಹಿಂ ನಡುಪದವು, ಜಿಲ್ಲಾ ಕಾರ್ಯದರ್ಶಿ ರಂಜಿತ್ ಬಂಗೇರ, ಜಿಲ್ಲಾ ಮಹಿಳಾ ಪ್ರ.ಕಾ ಲವೀನಾ , ನಗರ ಪ್ರ.ಕಾ ವಿಲ್ಮಾ, ಉಪಸ್ಥಿತರಿದ್ದರು.