ಉಡುಪಿ, ಏ.22(DaijiworldNews/AA): ಬಂಗಾರಪ್ಪ ಮತ್ತು ರಾಜ್ಕುಮಾರ್ ಇಬ್ಬರ ಕುಟುಂಬಕ್ಕೆ ನಾವು ಋಣಿಯಾಗಿದ್ದೇವೆ. ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಮತ್ತು ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಶಿವರಾಜ್ಕುಮಾರ್ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
182 ವರ್ಷಗಳಿಂದ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತಿತ್ತು. 182 ವರ್ಷಗಳಲ್ಲಿ ಮೊದಲ ಬಾರಿಗೆ ಜನಗಣತಿ ನಡೆಯುತ್ತಿಲ್ಲ. ರಾಷ್ಟ್ರದಲ್ಲಿ ಅಂಡರ್ ಕರೆಂಟ್ ಹರಿಯುತ್ತಿದೆ, ಇದು ಈ ಚುನಾವಣೆಯಲ್ಲಿ ಸ್ಫೋಟಗೊಳ್ಳುತ್ತದೆ ಎಂದು ಹೇಳಿದರು.
ಇಂದು ಸಾಕಷ್ಟು ತಂತ್ರಜ್ಞಾನ ಅಭಿವೃದ್ಧಿ ಹೊಂದಿದ್ದರೂ, ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 60 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಮಧ್ಯೆ ಪ್ರಧಾನಿ ಒಂದು ರಾಷ್ಟ್ರ ಒಂದು ಮತವನ್ನು ಪ್ರಸ್ತಾಪಿಸುತ್ತಿದ್ದಾರೆ. ಇನ್ನು ಈ ಹೊಸ ವ್ಯವಸ್ಥೆ ಎಷ್ಟು ಸಮಯವನ್ನು ತೆಗೆದುಕೊಳ್ಳಬಹುದೆಂದು ಯೋಚಿಸಿ ಎಂದು ತಿಳಿಸಿದ್ದಾರೆ.
ಯಾರೂ ರಾಷ್ಟ್ರದ ಮೇಲೆ ತಮ್ಮದೇ ಆದ ದೃಷ್ಟಿಕೋನವನ್ನು ಜಾರಿಗೆ ತರಬಾರದು. ಜನರು ತನಗೆ ಮಾತ್ರ ಮತ ಹಾಕುತ್ತಾರೆ ಎಂದು ಅವರು ಯೋಚಿಸುತ್ತಿರಬಹುದು. ರಾಷ್ಟ್ರದಲ್ಲಿ ಅಂಡರ್ ಕರೆಂಟ್ ಹರಿಯುತ್ತಿದೆ. ಜನರು ಪ್ರಜಾಪ್ರಭುತ್ವದ ದಣಿವಿನ ಸ್ಥಿತಿಯಲ್ಲಿದ್ದಾರೆ. ನಾಗಾಲ್ಯಾಂಡ್ನಲ್ಲಿ 6 ಜಿಲ್ಲೆಗಳ 4 ಲಕ್ಷ ಜನರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಈ ಬಾರಿ ಎನ್ಡಿಎ, ಬಿಜೆಪಿ ಬದಲು ಮೋದಿ ಗ್ಯಾರಂಟಿ, ಒಂದು ರಾಷ್ಟ್ರ ಒಂದು ಮತ ಎಂದು ಹೇಳಲಾಗುತ್ತಿದೆ ಎಂದರು.
ಇನ್ನು ಶಿವಮೊಗ್ಗ-ಬೈಂದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ಜನರ ಬೆಂಬಲವಿದೆ, ಬೈಂದೂರು ಹಾಗೂ ಶಿವಮೊಗ್ಗ ಭಾಗದ ಸಮಸ್ಯೆಗಳು ಬೇರೆ ಬೇರೆಯಾಗಿದ್ದು, ಅಭಿವೃದ್ಧಿಗೆ ಯೋಜನೆ ರೂಪಿಸಿದ್ದೇವೆ. ನಾನು ಜನರೊಂದಿಗೆ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ, ಬೈಂದೂರು ಮಾಜಿ ಶಾಸಕ ಪ್ರಸಾದರಾಜ್ ಕಾಂಚನ್, ಮುನಿಯಾಲ್ ಉದಯಕುಮಾರ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.