ಕಾಸರಗೋಡು, ಏ 20 (DaijiworldNews/MS): ಕಾಸರಗೋಡು ಲೋಕಸಭಾ ಕ್ಷೇತ್ರದ ಕಲ್ಯಾಶ್ಯೇರಿ ಯಲ್ಲಿ 92 ರ ಹರೆಯದ ವೃದ್ಧೆಯ ಹೆಸರಲ್ಲಿ ನಕಲಿ ಮತದಾನದ ಬಗ್ಗೆ ಆರೋಪ ಉಂಟಾಗಿದ್ದು , ಈ ಬಗ್ಗೆ ನಾಲ್ವರು ಮತಗಟ್ಟೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
'ಮನೆಯಲ್ಲಿ ಮತದಾನ ' ಪ್ರಕ್ರಿಯೆಯಂತೆ ದೇವಿ ಎಂಬ ವೃದ್ದೆ ಮತದಾನ ಮಾಡಬೇಕಿತ್ತು . ಆದರೆ ದೇವಿ ರವರ ಬದಲು ಕಲ್ಯಾಶ್ಯೇರಿಯ ಸಿಪಿಎಂ ಮಾಜಿ ಬ್ರಾಂಚ್ ಕಾರ್ಯದರ್ಶಿ ಹಾಗೂ ಬೂತ್ ಏಜಂಟ್ ಆಗಿರುವ ಗಣೇಶ್ ಮತದಾನ ಮಾಡಿದ್ದು , ಇದರ ಸಿ ಸಿ ದ್ರಶ್ಯ ಹೊರಬೀಳುತ್ತಿದ್ದಂತೆ ಅಧಿಕಾರಿಗಳನ್ನು ಅಮಾನತು ಗೊಳಿಸಿ ಕಣ್ಣೂರು ಜಿಲ್ಲಾ ಚುನಾವಾಣಾಧಿಕಾರಿ ಅರುಣ್ ಕೆ. ವಿಜಯನ್ ಆದೇಶ ನೀಡಿದ್ದಾರೆ.
ಈ ಬಗ್ಗೆ ತನಿಖೆಗೆ ಹಾಗೂ ಇಲಾಖಾ ಮಟ್ಟದ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.ಕಾನೂನು ಉಲ್ಲಂಘನೆ ಗೆ ಸಂಬಂಧ ಪಟ್ಟಂತೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ವರದಿ ನೀಡಲಾಗಿದೆ