ಉಡುಪಿ, ಏ 19 (DaijiworldNews/MS): ಪ್ರಜಾಪ್ರಭುತ್ವ ದಲ್ಲಿ ಜನರ ತೀರ್ಪಿಗೆ ತಲೆಬಾಗಬೇಕು.ವಾಜಪೇಯಿಯಂತವರು ನಮಗೆ ಸಹಕಾರ ಕೊಟ್ಟಿದ್ದರು.ಇತ್ತೀಚೆಗೆ ಬರೀ ಸುಳ್ಳು ಭರವಸೆ, ಜಾತಿ ವೈಷಮ್ಯ ಶುರುವಾಗಿದೆ ಎಂದು ಉಡುಪಿಯಲ್ಲಿ ಇಂಧನ ಸಚಿವ ಉಡುಪಿ ಚಿಕ್ಕಮಗಳೂರು ಚುನಾವಣಾ ಉಸ್ತುವಾರಿ ಕೆ.ಜೆ ಜಾರ್ಜ್ ಹೇಳಿದರು.
ಇಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೋದಿ 10 ವರ್ಷ ಅಭಿವೃದ್ಧಿ ಮಾಡಿಲ್ಲ, ಮಾತ್ರವಲ್ಲ ರಚನಾತ್ಮಕ ಕೆಲಸ ಮಾಡಿಲ್ಲ.ಬಿಜೆಪಿ 600 ಭರವಸೆಯಲ್ಲಿ ಕೇವಲ 50 ಭರವಸೆಯನ್ನು ಮಾತ್ರ ಈಡೇರಿಸಿದ್ದಾರೆ.ಯುವ ಸಮುದಾಯ ದೇಶದಲ್ಲಿ ಇರುವಾಗ ಜಿಡಿಪಿ ಡಬ್ಬಲ್ ಡಿಜಿಟ್ ಇರಬೇಕು. ಕಾಂಗ್ರೆಸ್ 70 ವರ್ಷದಲ್ಲಿ ಏನೂ ಮಾಡಿಲ್ಲ ಎನ್ನುವ ಬಿಜೆಪಿಗೆ ನೈತಿಕತೆ ಇದೆಯಾ? ಸೋನಿಯಾ ಗಾಂಧಿ ದೇಶಕ್ಕಾಗಿ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು ಎಂದರು.
ಇನ್ನು ಆಡಳಿತ ವಿಚಾರವಾಗಿ ಮಾತನಾಡಿ ದೇವೇಗೌಡ, ಯಡಿಯೂರಪ್ಪರನ್ನು ಪಕ್ಕದಲ್ಲಿ ಇಟ್ಟುಕೊಂಡು ಮೋದಿ ಕುಟುಂಬ ರಾಜಕಾರಣ ಬಗ್ಗೆ ಮಾತಾಡ್ತಾರೆ. ವಾಜಪೇಯಿ ಬಗ್ಗೆ ಬಹಳ ಗೌರವ ಇದೆ, ಅವರು ಉತ್ತಮ ಆಡಳಿತಗಾರ.ಸಚಿವ ಗಡ್ಕರಿ ದೇಶದಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ.ಬಿಜೆಪಿಯವರು ನಾಲ್ಕು ಮೀನು ಹಿಡಿಯಲು ಇಡೀ ಕೆರೆಯನ್ನು ಕೆಡಿಸಿದ್ದಾರೆ. ಬ್ರಿಟೀಷರನ್ನು ಓಡಿಸಿದ ಜನ, ಪಕ್ಷ ಬೆಂಬಲ ಬದಲಾಯಿಸಿದ ಜನ ಯಾರಿಗೂ ಶಾಶ್ವತ ಅಧಿಕಾರ ಕೊಟ್ಟಿಲ್ಲ.ಕೆಡಿಪಿ ಸಭೆಗೆ ಬಿಜೆಪಿ ಸಂಸದೆ, ಮಂತ್ರಿ ಶೋಭಾ ಬಂದಿಲ್ಲ.ಶೋಭಾ ಒಂದು ಟೂರಿಂಗ್ ಟಾಕೀಸ್.ಕೋಟ ಪರಿಷತ್ ವಿಪಕ್ಷ ನಾಯಕ ಆಗಿ ಇತ್ತೀಚೆಗೆ ಆಯ್ಕೆಯಾಗಿದ್ದರು. ಪರಿಷತ್ ವಿಪಕ್ಷ ನಾಯಕರನ್ನು ಬದಲಾಯಿಸಿ ಬೇರೆ ಯಾರನ್ನೋ ತರಲು ಹೊರಟಿದ್ದಾರೆ ರಾಜ್ಯದಲ್ಲಿ 28ಕ್ಕೆ 28 ಸ್ಥಾನ ಗೆಲ್ಲುತ್ತೇವೆ.. ಹಲವು ಬಾರಿ ಗೆದ್ದಿದ್ದೇವೆ ಇವಾಗಲೂ ನಮ್ಮ ಕಾಂಗ್ರೆಸ್ ಗೆಲ್ಲುತ್ತೆವೆ ಎಂದರು.
ಸಚಿವ ಬೈರತಿ ಸುರೇಶ್ ಹೇಳಿಕೆ ವಿಚಾರವಾಗಿ ಮಾತನಾಡಿ ಈ ಹೇಳಿಕೆ ಹಿನ್ನೆಲೆಗಳ ಬಗ್ಗೆ ನನಗೆ ಗೊತ್ತಿಲ್ಲ.ನೀವು ಭೈರತಿ ಸುರೇಶ್ ಅವರನ್ನೇ ಕೇಳಿ ಎಂದು ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯಕುಮಾರ್ ಸೊರಕೆ ˌಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ˌ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ˌ ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ, ಮುಖಡರಾದ ಪ್ರಸಾದ್ ರಾಜ್ ಕಾಂಚನ್ ˌ ಕೆಪಿಸಿಸಿಯ ನವೀನ್ ಚಂದ್ರ ಶೆಟ್ಟಿ ˌ ಶಿಕ್ಷಕರ ಮತದಾರ ಕ್ಷೇತ್ರದ ಅಭ್ಯರ್ಥಿ ಮಂಜುನಾಥ್ ˌ ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರುˌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಬಲ ಕುಂದರ್ ˌ ಜಿಲ್ಲಾ ಉಪಾಧ್ಯಕ್ಷ ಶಬೀರ್ ಅಹ್ಮೆದ್ ಮತ್ತಿತರು ಉಪಸ್ಥಿತರಿದ್ದರು.