ಉಡುಪಿ, ಏ. 19(DaijiworldNews/AA): 2023-2024 ನೇ ಸಾಲಿನಲ್ಲಿ ಕಲಾ ವಿಭಾಗದಲ್ಲಿ 584ಅಂಕ ಪಡೆದು ಶೇ. 97.33 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಯಮುನಮ್ಮ ಬಿರಾದಾರ್ ಅವರನ್ನು ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಶಂಕರನಾರಾಯಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಹಾಕಪ್ಪ ಲಮಾಣಿ ಸರ್ ಜಿಲ್ಲಾಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ, ವೀಣಾ ನಾಯಕ್ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು ಕುಂದಾಪುರ, ಮಹಾಲಕ್ಷ್ಮಿ ಬೋಳಾರ್ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಉಡುಪಿ, ಶಂಕರನಾರಾಯಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಗಂಗೂರಾಜ್, ಶಂಕರನಾರಾಯಣ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗದೀಶ್ ಭಟ್ಟ, ಶಂಕರನಾರಾಯಣ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಸಿರ್ ಹುಸೇನ್, ಆಶಾದೇವಿ ನಾಯಕ್ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಕುಂದಾಪುರ ಇವರು ಉಪಸ್ಥಿತರಿದ್ದು ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಸುವರ್ಣ ದೊಡ್ಡಮನಿ (96.5%), ರಮ್ಯ (95.83), ಅಕ್ಷತಾ (94.5), ಸಿದ್ದಮ್ಮ (90.83), ಸುವರ್ಣ ರಕ್ಷಿತಾ (90%)ಇವರನ್ನು ಸನ್ಮಾನಿಸಲಾಯಿತು ನಿಲಯದ 2023-24ನೇ ಸಾಲಿನ ಫಲಿತಾಂಶ 100%ಆಗಿದ್ದು ಪರೀಕ್ಷೆಗೆ ಕುಳಿತ 22 ವಿದ್ಯಾರ್ಥಿನಿಯರಲ್ಲಿ 9 ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ, 13 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರುತ್ತಾರೆ.