ಬೆಳ್ತಂಗಡಿ, ಏ. 18(DaijiworldNews/AA): ತನ್ನ ಮನೆಯ ಸಾಕು ನಾಯಿಯನ್ನು ಮನೆ ಮಾಲಕಿ ಮುದ್ದಾಡುವಾಗ ಆಕೆಯ ಮೇಲೆ ಏಕಾಏಕಿ ದಾಳಿ ನಡೆಸಿ ತಲೆ ಭಾಗವನ್ನು ಸೀಳಿ ಹಾಕಿ ಕೈಗೆ ಗಂಭೀರ ಗಾಯ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ಗುರುವಾರ ನಡೆದಿದೆ.
ಮುಂಡಾಜೆ ಗ್ರಾಮದ ನಿಡಿಗಲ್ ಓಂಕಾರ್ ನಿವಾಸಿ ಪೂರ್ಣಿಮಾ (49) ಎಂಬವರು ಗಂಭೀರ ಗಾಯಗೊಂಡವರು.
ಇಂದು ಪೂರ್ಣಿಮಾ ಅವರು ತಮ್ಮ ಮನೆಯ ಸಾಕು ನಾಯಿಯೊಂದಿಗೆ ಪ್ರತಿನಿತ್ಯದಂತೆ ಆಟವಾಡುತ್ತಿದ್ದರು. ಆಗ ಮಹಿಳೆ ಕಾಲು ಜಾರಿ ನೆಲಕ್ಕೆ ಜಾರಿಬಿದ್ದಾರೆ. ಈ ವೇಳೆ ಸಾಕು ನಾಯಿ ಮಹಿಳೆಯ ಮೇಲೆ ದಾಳಿ ನಡೆಸಿ ತಲೆ ಭಾಗವನ್ನು ಸೀಳಿ ಹಾಕಿದೆ. ಜೊತೆಗೆ ಕೈಗೆ ಕಚ್ಚಿ ಗಂಭೀರ ಗಾಯಮಾಡಿದೆ. ಪೂರ್ಣಿಮಾ ಅವರನ್ನು ಮನೆಯವರು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.