ಕೋಟೇಶ್ವರ, ಏ 18 (DaijiworldNews/MS): ಸಮಾಜದಲ್ಲಿ ನಾವೆಲ್ಲರೂ ಒಟ್ಟಾಗಿರಬೇಕು ಎನ್ನುವುದು ಕಾಂಗ್ರೆಸ್, ಜಾತಿ ಜಾತಿಗಳಲ್ಲಿ, ಧರ್ಮ ಧರ್ಮಗಳ ನಡುವೆ ಭೇದ ತಂದಿಡುವ ಉದ್ದೇಶವೇ ಬಿಜೆಪಿ. ಜಾತಿ, ಮತ, ಧರ್ಮಗಳನ್ನು ಮೀರಿದ ವ್ಯಕ್ತಿತ್ವ ಕೆ. ಜಯಪ್ರಕಾಶ್ ಹೆಗ್ಡೆಯವರದ್ದು. ಹೆಗ್ಡೆಯವರು ಪ್ರಾಮಾಣಿಕತೆ, ಸತ್ಯದ ಮೇಲೆ ನಿಂತವರು. ಕ್ಷೇತ್ರದಲ್ಲಿ ಹೆಗ್ಡೆಯವರ ಗೆಲುವು ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯ ಹೇಳಿದರು.
ಬುಧವಾರ ಕೋಟೇಶ್ವರದ ಪೇಟೆಯಲ್ಲಿ ನಡೆದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಗ್ಯಾರಂಟಿಗಳಿಂದ ಜನ ಸಂಭ್ರಮಿಸುತ್ತಿದ್ದಾರೆ. ಬಿಜೆಪಿಬಾಪಹಾಸ್ಯ ಮಾಡುತ್ತಿದ್ದ ಗ್ಯಾರಂಟಿಗಳು ಹಳ್ಳಿ ಹಳ್ಳಿಗಳನ್ನುವತಲುಪಿದೆ. ದೇವಸ್ಥಾನಗಳ ಆದಾಯ ಐದುಬಪಟ್ಟು ಹೆಚ್ಚಾಗಿದೆ. ಮಹಿಳೆಯರು ಉಚಿತ ಬಸ್ಸುಗಳನ್ನು ಖಷಿಯಿಂದ ಬಳಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ಸಿನಿಂದ ಕದ್ದ ಗ್ಯಾರಂಟಿಗಳು ಬಿಜೆಪಿಯ ಪತ್ರಿಕೆಗಳಲ್ಲಿವೆ ಎಂದು ಲೇವಡಿ ಮಾಡಿದರು. ದೇಶದ ಏಳು ಲಕ್ಷ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಗಳನ್ನು ಕಟ್ಟಿಸಿದ್ದು ಕಾಂಗ್ರೆಸ್. ಈ ದೇಶ ಬಾಳಿ ಬೆಳಗಲಿ ಎಂದು ಕನಸು ಕಂಡಿದ್ದು ಕಾಂಗ್ರೆಸ್. ಇದು ಕಾಂಗ್ರೆಸ್ ನ ಬದ್ಧತೆ ಎಂದರು.
ಉಡುಪಿ ಪ್ರತ್ಯೇಕ 'ಜಿಲ್ಲೆ'ಯಾಗತಕ್ಕಂತಹ ಚಾರಿತ್ರಿಕ ಘಟನೆ ಇಲ್ಲಿ ಏನಾದರೂ ನಡೆದಿದೆ ಎಂದರೇ ಅದಕ್ಕೆ ಕೆ. ಜಯಪ್ರಕಾಶ್ ಹೆಗ್ಡೆಯವರು ಕಾರಣ. ಈ ಬಾರಿಯ ಚುನಾವಣೆ ಸತ್ಯ ಮತ್ತು ಅಸತ್ಯದ ನಡುವಿನ ಯುದ್ಧ. ಸತ್ಯ ಮತ್ತು ಪ್ರಾಮಾಣಿಕತೆ ಗೆಲ್ಲಬೇಕೆಂದರೆ ಜಯಪ್ರಕಾಶ್ ಹೆಗ್ಡೆ ಗೆಲ್ಲಬೇಕು ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಸುದೀರ್ ಕುಮಾರ್ ಮುರೋಳಿ ಹೇಳಿದರು.
ಬೈಂದೂರಿನ ಮಾಜಿ ಶಾಸಕ ಬಿ.ಎಮ್ ಸುಕುಮಾರ ಶೆಟ್ಟಿ ಮಾತನಾಡಿ, ಸಮರ್ಥನಾಯಕನಾದವನು ಸಾಮಾನ್ಯ ಜನರ ಸಂಪರ್ಕಕ್ಕೆ ಸಿಗುವಂತಿರಬೇಕು. ಹೆಗ್ಡೆಯವರು ಜನ ಸಂಪರ್ಕದಲ್ಲಿರುವವರು. ಆದರೆ ಕೋಟ ಶ್ರೀನಿವಾಸ ಪೂಜಾರಿ ಸುಳ್ಳು ಹೇಳುವುದರ ಮೂಲಕವೇ ತಮ್ಮ ರಾಜಕೀಯ ಜೀವನ ವೃದ್ಧಿಸಿಕೊಂಡಿದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ರಘುಪತಿ ಭಟ್, ಪ್ರಮೋದ್ ಮಧ್ವರಾಜ್ ಅವರನ್ನು ಒಳಗೊಂಡು ನನಗೂ ಟಿಕೇಟ್ ಸಿಗದೇ ಇರುವ ಹಾಗೆ ಮಾಡಿದ್ದು ಇದೇ ಕೋಟ ಶ್ರೀನಿವಾಸ ಪೂಜಾರಿ ಎಂದು ಆರೋಪಿಸಿದರು. ಇಂತಹಾ ವ್ಯಕ್ತಿಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಬೇಕು ಎಂದರು.
ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡದ ಭಾಗವಾಗಿದ್ದ ಉಡುಪಿಯನ್ನು ಜಿಲ್ಲೆಯಾಗಿ ಪರಿವರ್ತಿಸಿ ಸರ್ಕಾರವನ್ನು ನಿಮ್ಮ ಬಳಿಗೆ ತಂದು ನಿಮ್ಮ ಕೆಲಸಗಳು ಸುಲಭವಾಗುವ ಹಾಗೆ ಮಾಡಿದ ತೃಪ್ತಿ ಇದೆ. ಅಭಿವೃದ್ಧಿಯ ಬಗ್ಗೆ ಮಾತ್ರ ಮಾಡುತ್ತೇನೆ, ನಾನು ಮಾಡಿದ ಕೆಲಸವನ್ನೇ ಮುಂದಿಟ್ಟು ನಾನು ಮತ ಯಾಚಿಸುತ್ತೇನೆ, ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ ಎಂದರು.
ಚುನಾವಣೆಯಲ್ಲಿ ಗೆದ್ದರೇ ಆದ್ಯತೆಯಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ತರುವ ಕೆಲಸವನ್ನು ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು. ಮೀನುಗಾರರಿಗೆ, ಅಡಿಕೆ ಬೆಳೆಗಾರರಿಗೆ ನೀಡಿದ ಯೋಜನೆಗಳನ್ನು ಜನ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಭಾವಿಸುತ್ತೇನೆ ಎಂದರು. ಬಿಜೆಪಿಯವರು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಕೊಡ್ತೇವೆ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು, ಒಂದು ವೇಳೆ ಅವರು ಹೇಳಿದ ಹಾಗೆ ಮಾಡಿದ್ದಿದ್ದರೇ ಕಳೆದ ಹತ್ತು ವರ್ಷಗಳಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೇ ಅವರು ಹೇಳಿದ್ದನ್ನು ಯಾವುದೂ ಮಾಡುವುದಿಲ್ಲ. ಜನರು ಅವರನ್ನು ಪ್ರಶ್ನಿಸಲೇ ಇಲ್ಲ. ಜನರು ಯಾರನ್ನು ಕೇಳಬೇಕು ..? ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು.
ಈ ಭಾರಿಯ ಚುನಾವಣೆಗೆ 25 ಲಕ್ಷ ಜೀವ ವಿಮೆಯ ಭರವಸೆಯನ್ನು ನಮ್ಮ ಕಾಂಗ್ರೆಸ್ ಕೊಟ್ಟಿದೆ. ನಮ್ಮದು ಭರವಸೆ ಮಾತ್ರವಲ್ಲ. ಅಧಿಕಾರಕ್ಕೆ ಕಾಂಗ್ರೆಸ್ ಪಕ್ಷ ಬಂದರೇ ನೀಡಿದ ಭರವಸೆಯನ್ನು ಕಾರ್ಯರೂಪಕ್ಕೂ ತರುತ್ತೇವೆ. ಅದಕ್ಕೆ ದೊಡ್ಡ ಉದಾಹರಣೆಯೆ ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಈ ಚುನಾವಣೆ ಬದುಕು ಮತ್ತು ಭಾವನೆಗಳನ್ನು ಕೆರಳಿಸುವ ಸಿದ್ಧಾಂತದ ನಡುವೆ ನಡೆಯುವ ಚುನಾವಣೆ. ಬದುಕನ್ನು ಕೊಟ್ಟ ಪಕ್ಷಕ್ಕೆ ಮತದಾನ ಮಾಡಬೇಕೋ ಅಥವಾ ಭಾವನೆಗಳನ್ನು ಕೆರಳಿಸುವ ಪಕ್ಷಕ್ಕೆ ಮತದಾನ ಮಾಡಬೇಕೋ ಎಂದು ಪ್ರಾಮಾಣಿಕವಾಗಿ ಪ್ರತಿ ಮತದಾರ ನಿರ್ಧರಿಸುವ ತುರ್ತಿದೆ ಎಂದು ಹೇಳಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೇ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ಬಿಜೆಪಿಯ ಮಾಜಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೇ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ನಿಲ್ಲಿಸುತ್ತೇವೆ ಎಂದು ಬಿಜೆಪಿಯ ಮಾಜಿ ಸಚಿವರೊಬ್ಬರು ಹೇಳಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಮುಂದುವರಿಯಬೇಕಾದರೇ ನಿಮ್ಮ ಮತದಾನ ಕಾಂಗ್ರೆಸ್ ಗೆ ಮಾಡಬೇಕಿದೆ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಕುಂದಾಪುರ ಬ್ಲಾಕ್ ನ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ ಪ್ರಕಾಶ್ಚಂದ್ರ ಶೆಟ್ಟಿ ಅಶೋಕ್ ಪೂಜಾರಿ ಬೀಜಾಡಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.