ಕಾಸರಗೋಡು ನ 19: ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ. ಈ ಹಿಂದೆ ಮುಷ್ಕರ ನಡೆಸಿದ ಸಂದರ್ಭದಲ್ಲಿ ನೀಡಿದ ಭರವಸೆ ಪಾಲಿಸಿಲ್ಲ ಇದರಿಂದ ಡಿಸೆಂಬರ್ ಒಂದರಿನಿಂದ ಮತ್ತೆ ಮುಷ್ಕರ ನಡೆಸಲು ಭಾರತೀಯ ದಾದಿಯರ ಸಂಘಟನೆ ಮುಂದಾಗುತ್ತಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ನಿಬಂಧನೆಗಳನ್ನು ಪಾಲಿಸದಿದ್ದಲ್ಲಿ ಮತ್ತೆ ಹೋರಾಟ ನಡೆಸಲಾಗುವುದು ಎಂದು ಐ ಎನ್ ಎ ಮುಖಂಡರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆಲಸದ ಸಮಯದ ಬಗ್ಗೆ ಈ ಹಿಂದೆ ನಾಲ್ಕು ಬಾರಿ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಮಾತುಕತೆ ನಡೆಸಿದರೂ ಅದು ವಿಫಲ ಗೊಂಡಿತ್ತು. ಕೆಲಸದ ಸಮಯ ಕಡಿತಗೊಳಿಸಬೇಕು ಎಂಬ ಬೇಡಿಕೆ ಬಹುತೇಕ ಆಸ್ಪತ್ರೆಗಳಲ್ಲಿ ಪಾಲನೆಯಾಗಿಲ್ಲ . ಇದರಿಂದ ಹೋರಾಟದ ಬಗ್ಗೆ ಮುನ್ನೆಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ವಿ . ವಿ ನಿಖಿಲ್ , ಆನು ವರ್ಗಿಸ್ , ಜಿಮ್ನಿ ಜೋಸ್ , ಸ್ಮಿತಾ ಸೂಸನ್ ಮೊದಲಾದವರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಇತ್ತೀಚಿಗೆ ಮಗುವಿನ ಪ್ರಾಣ ಉಳಿಸಲು ಕೇವಲ 6 ಗಂಟೆಯಲ್ಲಿ 508 ಕಿ.ಮೀ ಕ್ರಮಿಸಿದ ಆ್ಯಂಬುಲೆನ್ಸ್ ಚಾಲಕ ಕಾಸರಗೋಡು ಅಡ್ಕತ್ತಬೈಲ್ ನ ತಮೀಮ್ ರನ್ನು ಸಂಘಟನೆ ಕಾಸರಗೋಡು ಮೂಲದ ತಮೀಮ್ ರನ್ನು ಸನ್ಮಾನಿಸಿದರು.