ಉಡುಪಿ, ಮೇ 03 (Daijiworld News/SM): ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆಯಾಗಿದ್ದು ಸಂತೋಷಕರ ವಿಷಯವಲ್ಲ, ದುಃಖದ ವಿಚಾರ. ನಾಲ್ಕು ತಿಂಗಳಾದ ಬಳಿಕ ಅದು ಸಿಕ್ಕಿದೆ ಅಂದರೆ ಏಳು ಜನ ಮೀನುಗಾರರು ಕೂಡ ಬದುಕುಳಿಯುವುದು ಕಷ್ಟ. ಮುಂದೆ ಆಯೋಗ ಹೋಗಿ ಸದ್ಯದಲ್ಲೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಐಎನ್ಎಸ್ ಕೊಚ್ಚಿ ಮೇಲೆ ತನಿಖೆ ಮಾಡಲು ಆಗ್ರಹಿಸುತ್ತೇವೆ ಎಂದು ಶಾಸಕ ಕೆ ರಘಪತಿ ಭಟ್ ಹೇಳಿದರು.
ಐಎನ್ಐ ಕೊಚ್ಚಿಯ ತಳಭಾಗಕ್ಕೆ ಹಾನಿಯಾಗಿದೆ. ಅದರ ಮೇಲೆ ಎಲ್ಲರಿಗೂ ಸಂಶಯ ಕಂಡುಬರುತ್ತಿದೆ. ಒಂದು ವೇಳೆ ಡಿಕ್ಕಿ ಹೊಡೆದು ಹಾನಿ ಮಾಡಿದ್ದರೆ ಕೇಂದ್ರ ಸರಕಾರ ಪರಿಹಾರ ಕೊಡಬೇಕಾಗುತ್ತದೆ. ಸದ್ಯ ಏಳು ಮೀನುಗಾರ ಕುಟುಂಬದವರಿಗೆ ಹಣಕಾಸಿನ ಅಗತ್ಯವಿದೆ. ಹಾಗಾಗಿ ರಾಜ್ಯ ಸರಕಾರ ಕೂಡ 6 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಶಾಸಕರು ಹೇಳಿದ್ದಾರೆ.
150 ಕ್ಕೂ ನಿರೀಕ್ಷಕ್ ನೌಕಪಡೆಯ ಸಿಬ್ಬಂದಿಗಳು ರಾತ್ರಿ ಹಗಲು ಶ್ರಮ ಪಟ್ಟು ಕೆಲಸ ಮಾಡಿದ್ದಾರೆ. ಈ ತನಿಖೆಯಿಂದ ಒಂದು ಸರಿಯಾದ ತೀರ್ಮಾನಕ್ಕೆ ಬರಲು ಸಾಧ್ಯವಾಯಿತು ಎಂದಿದ್ದಾರೆ.
ಸೋಮವಾರ ಬೆಳಗ್ಗೆಯಿಂದಲೇ ಸೋನಾರ್ ತಂತ್ರಜ್ಞಾನ ಬಳಸಿ ತೀವ್ರತರದ ಶೋದನೆ ನಡೆಸಲಾಯಿತು. ಏಳು ಗಂಟೆಗಳಿಗಿಂತಲೂ ಹೆಚ್ಚು ಕಾಲ ನಡೆದ ಶೋಧನೆಯಿಂದ ಬೋಟ್ ಕೊನೆಗೂ ಪತ್ತೆಯಾಯಿತು. ಕಳೆದ ಬಾರಿಯೂ ಇದೇ ತಂತ್ರಜ್ಞಾನ ಬಳಸಲಾಗಿದ್ದರೂ ಯಾವುದೇ ಉಪಯೋಗವಾಗಿಲ್ಲ ಎಂದರು.