ಬೆಳ್ತಂಗಡಿ, ಮೇ 03 (Daijiworld News/SM): ನಾಮಪತ್ರ ಹಿಂತೆಗೆಯಲು ಹಣ ಪಡೆದಿರುವುದು ನಿರಾಧಾರ. ಪ್ರಾಮಾಣಿಕನಾದ ನನ್ನ ಮೇಲೆ ಆರೋಪ ಮಾಡಿರುವವರಿಗೆ ಶ್ರೀ ಮಂಜುನಾಥ ಸ್ವಾಮಿಯೇ ಸದ್ಭುದ್ಧಿಯನ್ನುಕೊಡಲಿ. ಆರೋಪದಿಂದ ಮನಸ್ಸು ಅಶಾಂತವಾಗಿದ್ದುಅದನ್ನು ನಿವಾರಿಸಿ ಪ್ರಾರ್ಥಿಸಿಕೊಳ್ಳಲು ಮತ್ತು ಈ ಬಗ್ಗೆ ಸಂಬಂಧಪಟ್ಟವರುಯಾವುದೇ ಸ್ಪಷ್ಟನೆ ನೀಡದೇ ಇರುವುದರಿಂದ ಧರ್ಮಸ್ಥಳಕ್ಕೆ ಬಂದಿದ್ದೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಮುದ್ದ ಹನುಮೇಗೌಡ ಸ್ಪಷ್ಟಪಡಿಸಿದ್ದಾರೆ.
ಹನುಮೇಗೌಡರ ನಡೆ ಬುಧವಾರದಿಂದ ಕುತೂಹಲ ಮೂಡಿಸಿತ್ತು. ಅವರು ಬೇರೆ ಪಕ್ಷ ಸೇರುತ್ತಾರೆ. ಆರೋಪ ಮಾಡಿದವರ ಹೆಸರನ್ನು ಹೇಳಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಪಕ್ಷ ಬಿಡುತ್ತಾರೆ, ಮೈತ್ರೀ ಪಕ್ಷವನ್ನು ಟೀಕಿಸುತ್ತಾರೆ ಎಂದೆಲ್ಲಾ ಊಹಾಪೋಹಗಳು ಹರಡಿದ್ದವು. ಗುರುವಾರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದೇವಳದ ಎದುರುಗಡೆ ಅವರು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿ ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದರು.
ಪ್ರಸಿದ್ಧವಾಗಿ ಕ್ಷೇತ್ರದಲ್ಲಿ ಇಂತಹ ಒಂದು ಪತ್ರಿಕಾಗೋಷ್ಠಿ ನಡೆಸುವುದು ಅಪೂರ್ವವಾದ್ದದ್ದು. ನಾನು ಮೂಲತಃರಾಜಕಾರಣಿಯಲ್ಲ. ನ್ಯಾಯಿಕ ಕ್ಷೇತ್ರದಲ್ಲಿದ್ದು ನ್ಯಾಯಾಧೀಶನಾಗಿದ್ದವನು. ರಾಜಕೀಯದ ಸೆಳೆತಕ್ಕಾಗಿ ನಾನು ಹತ್ತು ವರ್ಷಗಳ ಕಾಲ ಕುಣಿಗಲ್ನ ಶಾಸಕನಾಗಿದ್ದೇನೆ. ಐದು ವರ್ಷದಿಂದ ತುಮಕೂರು ಲೋಕಸಭಾಕ್ಷೇತ್ರದ ಸಂಸದಗಿದ್ದೇನೆ. ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಕ್ಷೇತ್ರದ ಅಭಿವೃದ್ದಿಗೆ ನಿರೀಕ್ಷೆಗೆ ಮೀರಿ ಕೆಲಸ ಮಾಡಿದ್ದೇನೆ.
ಚುನಾವಣೆ ಸಂದರ್ಭ ಯಾವುದೇ ಕಾರಣವಿಲ್ಲದೆ ಪುನಃ ಸ್ಪರ್ಧೆ ಮಾಡಲು ತಪ್ಪಿತು. ದೇಶದ, ಪಕ್ಷದ ನಾಯಕರ ತೀರ್ಮಾನಕ್ಕೆ ಮಣಿದು ನಾಮಪತ್ರ ಹಿಂತೆಗೆದು ಮೈತ್ರಿ ಧರ್ಮಕ್ಕನುಗುಣವಾಗಿ ಪ್ರಚಾರಕಾರ್ಯ ಮಾಡಿದ್ದೇನೆ. ಮೈತ್ರೀಯ ಅನಿವಾರ್ಯತೆಯಿಂದಾಗಿ ನನ್ನ ಸ್ಥಾನವನ್ನುರಾಜ್ಯ ರಾಜಕಾರಣದ ಹಿತದೃಷ್ಟಿಯಿಂದ ಮನವರಿಕೆ ಮಾಡಿದ ಹಿನ್ನಲೆಯಲ್ಲಿ ನಾಮಪತ್ರ ಹಿಂತೆಗೆದುಕೊಂಡೆ ಎಂದವರು ಹೇಳಿದ್ದಾರೆ.