ಮಂಗಳೂರು, ಏ. 14(DaijiworldNews/AA): ಸುಪ್ರಸಿದ್ಧ ಕೊಂಕಣಿ ಕವಯಿತ್ರಿ ಪ್ರೆಸ್ಸಿ ನೀ ಕಾರ್ಮಿನ್ ಮೆಂಡೋನ್ಕಾ(60) ಅವರು ಬಹ್ರೇನ್ ನಲ್ಲಿ ಶನಿವಾರ ನಿಧನರಾಗಿದ್ದಾರೆ.
ಪೊಯಿನ್ನಾರಿ, ಝೆಲೋ, ಮಿತ್ರ್ ಮತ್ತು ಇತರ ಕೊಂಕಣಿ ನಿಯತಕಾಲಿಕಗಳಲ್ಲಿ ಜನಪ್ರಿಯ ಕವಯತ್ರಿಯಾಗಿದ್ದ ಪ್ರೆಸ್ಸಿ ಮೆಂಡೋನ್ಕಾ ಅವರು, ಬಾಂಬೆ ಮೂಲದ ಸುಪ್ರಸಿದ್ಧ ಕೊಂಕಣಿ ನಾಟಕಕಾರ ಲೇಟ್ ಬ್ಯಾಪ್ಟಿಸ್ಟ್ ಮೆಂಡೋಂಕಾ (ಬಾಮ್ಸ್) ಅವರ ಹಿರಿಯ ಮಗಳಾಗಿದ್ದಾರೆ.
ಕೊಂಕಣಿ ನಿಯತಕಾಲಿಕೆಗಳು ಮತ್ತು ಕಲಾವಿದರ ಬೆನ್ನೆಲುಬಾಗಿದ್ದ ಪ್ರೆಸ್ಸಿ ಮೆಂಡೋನ್ಕಾ ಅವರು, ಕಿರೆಮ್ ನಾಮ್ವಾಚೋ ನಾಟಕ್ ಪಂಗಡ್(ಕೆಎನ್ ಎನ್ ಪಿ) ಅಡಿಯಲ್ಲಿ ಆಯೋಜಿಸಲಾದ ಅನೇಕ ಕೊಂಕಣಿ ನಾಟಕಗಳ ನಿರ್ದೇಶಕರೂ ಆಗಿದ್ದರು. ಬಾಂಬೆ ಅಲ್ಲದೆ ಬಹ್ರೇನ್ ಹಾಗೂ ಮಂಗಳೂರಿನಲ್ಲೂ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಪ್ರೆಸ್ಸಿ ಅವರು ಕೆಎನ್ ಎನ್ ಪಿಯ ಸಕ್ರಿಯ ಸದಸ್ಯರಾಗಿದ್ದರು ಹಾಗೂ ಖಜಾಂಚಿಯಾಗಿ ಅದರ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು.
ಪ್ರೆಸ್ಸಿ, ಮುಂಬೈ ಮೂಲದ ವಿಲಿಯಂ ಡಿ'ಮೆಲ್ಲೊ ಅವರನ್ನು ವಿವಾಹವಾದರು. ಹಾಗೂ ಈ ದಂಪತಿಗೆ ಚಾಲ್ಸಿಯಾ (ವನೆಸ್ಸಾ), ಕ್ಲೀಟಸ್ ಮತ್ತು ಕ್ರಿಸ್ ಎಂಬ ಮಕ್ಕಳಿದ್ದಾರೆ. ಪ್ರೆಸ್ಸಿ ಅವರು ತಮ್ಮ ಸಹೋದರಿಯ ಮಗಳ ಜನ್ಮದಿನ/ಮೊದಲ ಪವಿತ್ರ ಕಮ್ಯುನಿಯನ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಹ್ರೇನ್ ಗೆ ತೆರಳಿದ್ದರು. ಅಲ್ಲಿ ಪ್ರೆಸ್ಸಿ ಅವರು ನಿಧನ ಹೊಂದಿರುತ್ತಾರೆ. ಇನ್ನು ಪ್ರೆಸ್ಸಿ ಅವರ ಅಂತ್ಯಕ್ರಿಯೆಯ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.