ಉಡುಪಿ,ಏ. 14(DaijiworldNews/AK): ಚುನಾವಣೆ ಬಹಿಷ್ಕಾರ ಮಾಡುವುದು ಪರಿಹಾರ ಅಲ್ಲ, ಬದಲಾಗಿ ಯಾರು ಕೆಲಸ ಮಾಡುತ್ತಾರೆ ಅವರಿಗೆ ಮತ ನೀಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ " ಎಂದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಶೃಂಗೇರಿಯ ಕಿಗ್ಗಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು "ಈ ಹಿಂದೆ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಪಟ್ಟಿದ್ದೆ ಅದಕ್ಕೆ ಫಲ ಸಿಕ್ಕಿದೆ. ಚುನಾವಣೆ ಪೂರ್ವದಲ್ಲಿ ಬಿಜೆಪಿಯವರು ಪ್ರತಿ ಬಾರಿ ಗೋರಕ್ ಸಿಂಗ್ ವರದಿ ಜಾರಿಗೆ ಬಂದಿಲ್ಲ ಎಂದು ಹೇಳುತ್ತಿದ್ದರು, ೧೦ ವರ್ಷಗಳ ಕಾಲ ಅವರದ್ದೇ ಸರಕಾರ ಇದ್ದು, ಇಲ್ಲಿನ ಸಂಸದರೇ ಕೃಷಿ ಸಚಿವರಾಗಿದ್ದೂ ಕೂಡಾ ಇದನ್ನು ಅವರಿಂದ ಜಾರಿ ಮಾಡಲು ಆಗಲಿಲ್ಲ. ಅವರಿಗೆ ವಿರೋಧ ಮಾಡಲು ಮಾತ್ರ ಗೊತ್ತಿದೆ ಹೊರತು ಕೆಲಸ ಮಾಡಲು ಗೊತ್ತಿಲ್ಲ" ಎಂದರು.
ಇದೇ ಸಂಧರ್ಭದಲ್ಲಿ ಕೂಪ್ಪ ಹೋಬಳಿಯ ಹರಿಹರಪುರ ಗ್ರಾಮದಲ್ಲಿ ಮತಯಾಚನೆ ಮಾಡಲಾಯಿತು.ಈ ಸಂದರ್ಭದಲ್ಲಿ ಶಾಸಕರಾದ ಟಿ.ಡಿ ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಂಶುಮಂತ್ ಗೌಡ, ಕೊಪ್ಪ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀಬಾಳೆ ಮನೆ ನಟರಾಜು, ಹೋಬಳಿ ಅಧ್ಯಕ್ಷರಾದ ಕೊಡ್ತಲ್ ಮಿತ್ರ, ಶ್ರೀ ಕಕ್ಕುಡಿಗೆ ರವಿಂದ್ರ, ರಾಜ್ಯ ಕಿಸಾನ್ ಘಟಕದ ಅಧ್ಯಕ್ಷರಾದ ಶ್ರೀ ಸಚ್ಚಿನ್ ಮಿಗಾ ರವರು, ಹಾಗೂ ಎಲ್ಲಾ ಘಟಕದ ಅಧ್ಯಕ್ಷರುಗಳು, ಸದಸ್ಯರು ಹಾಗೂ ಎಲ್ಲಾ ಹಿರಿಯ,ಕಿರಿಯ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.
ಶೃಂಗೆರಿ: ಚುನಾವಣೆ ಬಹಿಷ್ಕಾರ ಮಾಡುವುದು ಪರಿಹಾರ ಅಲ್ಲ, ಬದಲಾಗಿ ಯಾರು ಕೆಲಸ ಮಾಡುತ್ತಾರೆ ಅವರಿಗೆ ಮತ ನೀಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ " ಎಂದು ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಶೃಂಗೇರಿಯ ಕಿಗ್ಗಾದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು "ಈ ಹಿಂದೆ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಪಟ್ಟಿದ್ದೆ ಅದಕ್ಕೆ ಫಲ ಸಿಕ್ಕಿದೆ. ಚುನಾವಣೆ ಪೂರ್ವದಲ್ಲಿ ಬಿಜೆಪಿಯವರು ಪ್ರತಿ ಬಾರಿ ಗೋರಕ್ ಸಿಂಗ್ ವರದಿ ಜಾರಿಗೆ ಬಂದಿಲ್ಲ ಎಂದು ಹೇಳುತ್ತಿದ್ದರು, ೧೦ ವರ್ಷಗಳ ಕಾಲ ಅವರದ್ದೇ ಸರಕಾರ ಇದ್ದು, ಇಲ್ಲಿನ ಸಂಸದರೇ ಕೃಷಿ ಸಚಿವರಾಗಿದ್ದೂ ಕೂಡಾ ಇದನ್ನು ಅವರಿಂದ ಜಾರಿ ಮಾಡಲು ಆಗಲಿಲ್ಲ. ಅವರಿಗೆ ವಿರೋಧ ಮಾಡಲು ಮಾತ್ರ ಗೊತ್ತಿದೆ ಹೊರತು ಕೆಲಸ ಮಾಡಲು ಗೊತ್ತಿಲ್ಲ" ಎಂದರು.
ಇದೇ ಸಂಧರ್ಭದಲ್ಲಿ ಕೂಪ್ಪ ಹೋಬಳಿಯ ಹರಿಹರಪುರ ಗ್ರಾಮದಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕರಾದ ಟಿ.ಡಿ ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಂಶುಮಂತ್ ಗೌಡ, ಕೊಪ್ಪ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಶ್ರೀಬಾಳೆ ಮನೆ ನಟರಾಜು, ಹೋಬಳಿ ಅಧ್ಯಕ್ಷರಾದ ಕೊಡ್ತಲ್ ಮಿತ್ರ, ಶ್ರೀ ಕಕ್ಕುಡಿಗೆ ರವಿಂದ್ರ, ರಾಜ್ಯ ಕಿಸಾನ್ ಘಟಕದ ಅಧ್ಯಕ್ಷರಾದ ಶ್ರೀ ಸಚ್ಚಿನ್ ಮಿಗಾ ರವರು, ಹಾಗೂ ಎಲ್ಲಾ ಘಟಕದ ಅಧ್ಯಕ್ಷರುಗಳು, ಸದಸ್ಯರು ಹಾಗೂ ಎಲ್ಲಾ ಹಿರಿಯ,ಕಿರಿಯ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.