ಕುಂದಾಪುರ, ಏ. 18(DaijiworldNews/AA): ಯಾವ ಅಪಪ್ರಚಾರಕ್ಕೂ ಈಶ್ವರಪ್ಪ ಬಗ್ಗಲ್ಲ. ನೂರಕ್ಕೆ ನೂರು ಸ್ಪರ್ಧೆ ಮಾಡುತ್ತೇನೆ ಯಾರಿಗೂ ನಿರಾಶೆ ಮಾಡೋಲ್ಲ ಚುನಾವಣೆಯಲ್ಲಿ ಗೆದ್ದು ಮೋದಿಯವರನ್ನು ಪ್ರಧಾನಿ ಮಾಡಲು ಕೈಎತ್ತುತ್ತೇನೆ ಎಂದು ಶಿವಮೊಗ್ಗ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಈಶ್ವರಪ್ಪ ನಾಮ ಪತ್ರ ಸಲ್ಲಿಸೊಲ್ಲ ಎಂದವರಿಗೆ ಶಿವಮೊಗ್ಗ ಕ್ಷೇತ್ರದ ಜನ ಉತ್ತರ ಕೊಟ್ಟಿದ್ದಾರೆ. ಯುವಕರು ನಾರಿಯರು ರೈತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಈಶ್ವರಪ್ಪ ಜೊತೆಗೆ ಇದ್ದೇವೆ ಎಂದು ತೋರಿಸಿದ್ದಾರೆ. ವಿಜಯೇಂದ್ರ ರವರು ನಾಮ ಪತ್ರ ವಾಪಸ್ ತೆಗೆದುಕೊಳ್ಳುತ್ತಾರೆ ಇನ್ನೂ ಕಾಲ ಮಿಂಚಿಲ್ಲ ಹಿರಿಯರು ಮಾತನಾಡುತ್ತಾರೆ ಎಂಬ ಸಪ ಪ್ರಚಾರ ಮಾಡುತ್ತಿದ್ದಾರೆ. ಕೆಲವೆಡೆ ಕಾರ್ಯಕರ್ತರು ಜಿಲ್ಲೆಯ ಬೇರೆ ಕಡೆ ಬಸ್ ವ್ಯವಸ್ಥೆ ಮಾಡಿದ್ದರು ಆದರೆ ಬಸ್ ಮಾಲೀಕರ ಮೇಲೆ ಒತ್ತಡ ಹೇರಿ ಬಸ್ ಗಳ ಕೊರತೆ ಆಗುವಂತೆ ಮಾಡಿದ್ದಾರೆ. ಆದರೂ ಜನ ಟ್ರಾಕ್ಟರ್ ಸೇರಿದಂತೆ ಬೇರೆ ವಾಹನಗಳ ವ್ಯವಸ್ಥೆ ಮಾಡಿಕೊಂಡು ಬಂದರು ಎಂದು ಅವರು ಹೇಳಿದರು.
ಚುನಾವಣೆ ಮಾಡುವುದಾದರೆ ನೇರ ಚುನಾವಣೆಗೆ ಬನ್ನಿ ಅಪಪ್ರಚಾರಗಳಿಗೆ ಬಗ್ಗಲ್ಲ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ. ನನ್ನ ಬಗ್ಗೆ ಭಯ ಆರಂಭವಾಗಿ ಬಹಳ ದಿನವಾಗಿದೆ. ಮಧು ಬಂಗಾರಪ್ಪ ಈಶ್ವರಪ್ಪ ಬಿಜೆಪಿಯ ಬಿ ಟೀಮ್ ಎನ್ನುತ್ತಾರೆ ಆದರೆ ವರ್ಜಿನಲ್ಲ ಬಿಜೆಪಿ ನನ್ನದೆ ಎಂದು ಬೆಂಬಲಿಗರು ತೋರಿಸಿದ್ದಾರೆ. ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಬಂದಿದ್ದಾರೆ ಹೊಂದಾಣಿಕೆ ಮಾಡಿಲ್ಲ ಎಂದು ಮಧು ಬಂಗಾರಪ್ಪ ಹೇಳಲಿ. ನಿಮ್ಮ ಹೊಂದಾಣಿಕೆಯಿಂದ ಕಾಂಗ್ರೆಸ್ ಪಕ್ಷದಿಂದ ಬೆಂಬಲ ನನಗೆ ಸಿಕ್ಕಿದೆ. ನೀವು ಅಧಿಕಾರಕ್ಕಾಗಿ ಎಲ್ಲಾ ಪಕ್ಷಗಳಿಗೆ ಹೋಗಿದ್ದೀರ. ಯಾರಿಗೋ ಟೀಕೆ ಮಾಡುವಂತೆ ಈಶ್ವರಪ್ಪ ನ ಟೀಕೆ ಮಾಡಬೇಡಿ. ನಾನು ಕೆಜೆಪಿಗೆ ಹೋಗಿಲ್ಲ ಆರ್ ಎಸ್ ಎಸ್ ನ ಸ್ವಯಂ ಸೇವಕ ಬಿಜೆಪಿ ಬಿಟ್ಟು ಬೇರೆಲ್ಲೂ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ಬಂದವರ ಬಗ್ಗೆ ಕೆಲವು ಹಾವು ಚೇಳುಗಳಿವೆ ಎಂದು ಸಂಸದರು ಹೇಳಿದ್ದಾರೆ ಮೆರವಣಿಗೆಯಲ್ಲಿ ಇದ್ದವರೆಲ್ಲಾ ಹಿಂದೂ ಹುಲಿಗಳು. ಬಿಜೆಪಿಯಲ್ಲಿರುವ ಹಿಂದುತ್ವವನ್ನು ಅಪ್ಪ ಮಕ್ಕಳು ಹಿಂದೆ ಸರಿಸುತ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಬಿಜೆಪಿ ಹಿಂದುತ್ವ, ಈಶ್ವರಪ್ಪ ಹಿಂದುತ್ವ ಒಂದೆ. ನಮ್ಮದು ಮೋದಿ ಹಿಂದುತ್ವ. ಕರ್ನಾಟಕದ ಬಿಜೆಪಿಯಲ್ಲಿ ಅಪ್ಪ ಮಕ್ಕಳು ಹಿಂದುತ್ವ ನಾಯಕರನ್ನು ಪಕ್ಕಕ್ಕೆ ಸರಿಸುವ ಪ್ರಯತ್ನ ಮಾಡುತ್ತಿದ್ದಾರೆ ಇದರ ವಿರುದ್ಧ ಹೋರಾಟ ಮಾಡಲು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ನಮ್ಮದೆ ನಿಜವಾದ ಹಿಂದುತ್ವ ಎಂದರು.
ಈಶ್ವರಪ್ಪ ಗೆದ್ದ ನಂತರ ಅಭಿವೃದ್ಧಿ ಮಾಡುತ್ತಾರೆ ಎಂದು ಕ್ಷೇತ್ರದ ಜನರಿಗೆ ಗೊತ್ತಿದೆ. ರಾಘವೇಂದ್ರ ಮೋದಿ ಕೊಟ್ಟದ್ದನ್ನು ತಂದಿದ್ದಾರೆ ನಾನು ಸಹ ಗೆದ್ದ ನಂತರ ಮೋದಿ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುತ್ತೇನೆ. ಹಿಂದೆ ಎಷ್ಟು ಜನ ಪ್ರಧಾನಿಗಳು ಇದ್ದರು ಆಗ ಸಂಸದರು ಇರಲಿಲ್ವ ಅಭಿವೃದ್ಧಿ ಮಾಡಲು ಹಿಂದೆ ಇದ್ದ ಪ್ರಧಾನಿಗಳು ಯೋಚನೆ ಮಾಡಲಿಲ್ಲ. ಮಗನಿಗಾಗಿ ಯಡಿಯೂರಪ್ಪ ಸಿ.ಟಿ.ರವಿ ಸೇರಿದಂತೆ ಅನೇಕ ಹಿಂದುತ್ವ ನಾಯಕರನ್ನ ಮೂಲೆಗುಂಪು ಮಾಡಿದ್ದಾರೆ ಡಂದು ಅವರು ಕಿಡಿಕಾರಿದರು.
ಹಿಂದುತ್ವ ಉಳಿಸುವುದು, ಪಕ್ಷ ಶುದ್ಧೀಕರಣ ಮಾಡಿ ಪಕ್ಷ ಉಳಿಸೋದು, ಗೆದ್ದ ನಂತರ ಮೋದಿ ಯೋಜನೆಗಳನ್ನು ಜಿಲ್ಲೆಗೆ ತಂದು ಅಭಿವೃದ್ಧಿ ಮಾಡುವುದು ನನ್ನ ಚುನಾವಣ ಪ್ರಣಾಳಿಕೆ.
ಸಿದ್ಧಾಂತ ಪರ ಹೋರಾಟ ಮಾಡುತ್ತಿದ್ದೇನೆ ಇದು ದೇಶಾದ್ಯಂತ ಚರ್ಚೆಯಲ್ಲಿದೆ. ಗೆದ್ದ ನಂತರ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಹೋರಾಗಾರರನ್ನು ಕರೆಸಿಕೊಂಡು ಕರೆಸಿ ಶರಾವತಿ ಸಂತ್ರಸ್ಥ, ವಿಐಎಸ್ ಎಲ್ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಧಿಕಾರಿ ಮಂತ್ರಿಗಳನ್ನು ಭೇಟಿ ಮಾಡಿಸಿ ಸಮಸ್ಯೆ ಬಗೆ ಹರಿಸುವಲ್ಲಿ ಕೆಲಸ ಮಾಡುತ್ತೇನೆ. ಈ ಚುನಾವಣೆಯಲ್ಲಿ ನಾನು ಗೆದ್ದ ನಂತರ ರಾಘವೇಂದ್ರ ಸೋಲುತ್ತಾರೆ. ರಾಜ್ಯಧ್ಯಕ್ಷ ಬದಲಾಗುತ್ತಾರೆ ಪಕ್ಷ ಶುದ್ಧೀಕರಣವಾಗುತ್ತದೆ ಎಂದು ತಿಳಿಸಿದರು.