ಮಂಗಳೂರು, ಏ 11 (DaijiworldNews/AA): ಕೆಪಿಸಿಸಿ ಇದರ ಅನಿವಾಸಿ ಭಾರತೀಯರ ವಿಭಾಗದ (ಎನ್ ಆರ್ ಐ) ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣ ಸಮಿತಿ ಸಂಯೋಜಕರಾಗಿ ಅನ್ವರ್ ಮಾಣಿಲರನ್ನು ಕೆಪಿಸಿಸಿ ಇದರ ಅನಿವಾಸಿ ಭಾರತೀಯರ ವಿಭಾಗ ನೇಮಕ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅನುಮೋದನೆ ಮೇರೆಗೆ ಎಐಸಿಸಿ ಇದರ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ (ಐಒಸಿ) ಘಟಕದ ಉಸ್ತುವಾರಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಸರಕಾರದ ಅನಿವಾಸಿ ಭಾರತೀಯ ಸಮಿತಿ (ಎನ್ ಆರ್ ಐ ಫೋರಂ) ಇದರ ಉಪಾಧ್ಯಕ್ಷೆ, ಕೆಪಿಸಿಸಿ ಎನ್ ಆರ್ ಐ ಸೆಲ್ ಅಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಅನ್ವರ್ ಮಾಣಿಲ ಅವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.
ಅನ್ವರ್ ಮಾಣಿಲ ಅವರು ಸುಮಾರು 18 ವರ್ಷದಿಂದ ಅನಿವಾಸಿ ಕನ್ನಡಿಗರಾಗಿ ಯುಏಇಯ ದುಬೈನಲ್ಲಿ ನೆಲೆಸಿರುತ್ತಾರೆ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರೂ ಆಗಿರುವ ಅನ್ವರ್ ಮಾಣಿಲ ಅವರು ಕಳೆದ ಹತ್ತಾರು ವರ್ಷದಿಂದ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಸಕ್ರಿಯರಾಗಿದ್ದಾರೆ. ಅನಿವಾಸಿ ಭಾರತೀಯ ಕಾಂಗ್ರೆಸ್ ಸದಸ್ಯರಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪೋಷಕ ಸಂಘಟನೆ ಐಎನ್ ಸಿಎಎಸ್ ಇದರ ಸಾಮಾಜಿಕ ಜಾಲತಾಣ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರದ ಹಲವಾರು ಅನಿವಾಸಿ ಕನ್ನಡಿಗರ ಪರ ಸಂಘಟನೆಯಲ್ಲಿ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ.