ಮಂಗಳೂರು, ಏ 11(DaijiworldNews/AK): ವಿಶಿಷ್ಟ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವದಂದು ಬುಧವಾರ ದೇವರಿಗೆ ಮಧ್ಯಾಹ್ನ ಮಹಾಪೂಜೆ, ಕಡೇ ಚೆಂಡು ಉತ್ಸವ ಹಾಗೂ ಆಳು ಪಲ್ಲಕ್ಕಿ ಉತ್ಸವ ನೇರವೇರಿತು.
https://daijiworld.ap-south-1.linodeobjects.com/Linode/images3/daya_100424_polkd15.JPG>
https://daijiworld.ap-south-1.linodeobjects.com/Linode/images3/daya_100424_polkd18.JPG>
https://daijiworld.ap-south-1.linodeobjects.com/Linode/images3/daya_100424_polkd17.JPG>
https://daijiworld.ap-south-1.linodeobjects.com/Linode/images3/daya_100424_polkd19.JPG>
https://daijiworld.ap-south-1.linodeobjects.com/Linode/images3/daya_100424_polkd21.JPG>
https://daijiworld.ap-south-1.linodeobjects.com/Linode/images3/daya_100424_polkd20.JPG>
https://daijiworld.ap-south-1.linodeobjects.com/Linode/images3/daya_100424_polkd22.JPG>
https://daijiworld.ap-south-1.linodeobjects.com/Linode/images3/daya_100424_polkd24.JPG>
https://daijiworld.ap-south-1.linodeobjects.com/Linode/images3/daya_100424_polkd23.JPG>
https://daijiworld.ap-south-1.linodeobjects.com/Linode/images3/daya_100424_polkd25.JPG>
https://daijiworld.ap-south-1.linodeobjects.com/Linode/images3/daya_100424_polkd27.JPG>
ಚೆಂಡು ಆಟದಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಗ್ರಾಮಗಳನ್ನು ಪ್ರತಿನಿಧಿಸುವ ಕಾರ್ಯಕ್ರಮದಲ್ಲಿ ದೂರದ ಹಾಗೂ ಸಮೀಪದ ಪ್ರದೇಶಗಳ ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಐದು ದಿನಗಳ ಆಚರಣೆಯುದ್ದಕ್ಕೂ ಕುಮಾರ ತೇರು, ಹೂ ತೇರು, ಸೂರ್ಯ ಮಂಡಲ, ಚಂದ್ರ ಮಂಡಲ, ಪಲ್ಲಕ್ಕಿ ಉತ್ಸವದಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ದೇವಳದ ತಂತ್ರಿಗಳಾದ ಸುಬ್ರಮಣ್ಯ ತಂತ್ರಿ, ಹಾಗೂ ದೇವಳದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಕೆ ರಾಮ್ ಭಟ್, ಪರಮೇಶ್ವರ ಭಟ್, ಆಡಳಿತ ಮೊಕ್ತೇಸಾರ ಡಾ, ಮಂಜಯ್ಯ ಶೆಟ್ಟಿ ಅಮ್ಮಂಜೆಗುತ್ತು, ಮೊಕ್ತೇಸರರಾದ ತಾರಾನಾಥ ಅಳ್ವ, ಚೇರಾ ಸೂರ್ಯ ನಾರಾಯಣ ರಾವ್ , ಅಮ್ಮಂಜೆ ಗುತ್ತಿನವರು, ಉಳಿಪಾಡಿ ಗುತ್ತಿನವರು, ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ದೇವಳದ ಪ್ರಮುಖ ಭಕ್ತಾದಿಗಳು ಮಹೋತ್ಸವದಲ್ಲಿ ಪಾಲ್ಗೊಂಡಿದರು.
ದಂತಕಥೆಯ ಪ್ರಕಾರ, ರಾಣಿ ಚೆನ್ನಮ್ಮ 1686 ರಲ್ಲಿ ಫಲ್ಗುಣಿ ನದಿಯ ದಡದಲ್ಲಿರುವ ಪೊಳಲಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಅಂಗವಾಗಿ ಆಡಲಾದ 'ಚೆಂಡು' ಕ್ರೀಡೆಯಿಂದ ಆಕರ್ಷಿತಳಾದಳು, ಇದು ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ ಎನ್ನಲಾಗುತ್ತಿದೆ.