ಮಂಗಳೂರು, ಏ 10(DaijiworldNews/AA): ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯ ಬಹುನಿರೀಕ್ಷಿತ ಕಲ್ಪವೃಕ್ಷ ಯೋಜನೆಯ ಉತ್ಪಾದನಾ ಘಟಕಗಳ ನೀಲ ನಕ್ಷೆ ಹಾಗೂ ಕಲ್ಪವೃಕ್ಷ ಷೇರು ಪ್ರಮಾಣ ಪತ್ರವನ್ನು ತುಮಕೂರಿನ ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು.
ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪನಿಯು ತೆಂಗಿನಿಂದ ಸಿಗುವ ಸೀಯಾಳದಿಂದ ಹಿಡಿದು ಗೆರಟೆ, ಚಿಪ್ಪಿನ ವರೆಗೂ ಅನೇಕ ಬಗೆಯ ಕಚ್ಚಾ ವಸ್ತುಗಳನ್ನು ವಿವಿಧ ಮಾದರಿಯ ಮೌಲ್ಯವರ್ಧಿತ ಉತ್ಪನ್ನಗಳನ್ನಾಗಿಸಿ ಹೊಸ ಮಾರುಕಟ್ಟೆಯನ್ನು ಜನರ ಮುಂದೆ ತೆರೆದಿಟ್ಟಿದೆ. ಇದೀಗ ಆದಿಚುಂಚನಗಿರಿ ಮಠದಲ್ಲಿ ನಡೆದ ನೀಲನಲಾಶೆ, ಷೇರು ಬಾಂಡ್ ಬಿಡುಗಡೆ ಸಮಾರಂಭದಲ್ಲಿ ಸಂಸ್ಥೆಯ ಬಗ್ಗೆ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ತೆಂಗಿನಿಂದ ತಯಾರಾಗುವ ವಿವಿಧ ಬಗೆಯ ಉತ್ಪನ್ನಗಳು ಹಾಗೂ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಬಿಡುಗಡೆಗೊಳಿಸಿದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು, ಸಂಸ್ಥೆಯ ಮೂಲಕ ತಯಾರಾಗುತ್ತಿರುವ ವಿವಿಧ ಪ್ರಕಾರದ ಆಹಾರೋತ್ಪನ್ನಗಳು, ಕರಕುಶಲ ವಸ್ತುಗಳನ್ನು ಪರಿಶೀಲಿಸಿದರು. ಹಾಗೂ ಸಂಸ್ಥೆಯ ಮೂಲಕ ತಯಾರಾಗುತ್ತಿರುವ ಪರಿಶುದ್ಧ ತೆಂಗಿನ ಎಣ್ಣೆಯನ್ನು ನೋಡಿ ಪ್ರಶಂಶಿಸಿದರು. ಜೊತೆಗೆ ಕಲ್ಪವಿಕಾಸ ಯೋಜನೆಯಡಿ ಮಹಿಳಾ ಸಬಲೀಕರಣ ಉತ್ತೇಜಿಸುವ ತರಬೇತಿ ಪಡೆದ 140ಕ್ಕೂ ಅಧಿಕ ಮಹಿಳೆಯರು ತೆಂಗಿನ ಚಿಪ್ಪಿನಲ್ಲಿ ತಯಾರಿಸಿದ ನಾನಾ ರೀತಿಯ ಕಲಾಕೃತಿಗಳು, ಕರಕುಶಲ ವಸ್ತುಗಳನ್ನು ಕಂಡು ಹಾಗೂ ತೆಂಗಿನ ಚಿಪ್ಪಿನಿಂದ ತಯಾರಿಸಲ್ಪಟ್ಟ ಶಿವಲಿಂಗದ ಕಲಾಕೃತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಕುರಿತು ಸ್ವಾಮೀಜಿಗಳಿಗೆ ಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ. ಅವರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ 15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪನಿಯು 300 ಕೋಟಿ ರೂ. ವೆಚ್ಚದಲ್ಲಿ ವಿಸ್ತ್ರತ ಯೋಜನೆ ಕೈಗೆತ್ತಿಕೊಂಡಿದೆ. ಕಲ್ಪವೃಕ್ಷ ಯೋಜನೆಯ ಅನುಷ್ಠಾನಕ್ಕೆ 50 ಕೋಟಿ ರೂ. ಮೌಲ್ಯದ ಈಕ್ವಿಟಿ ಷೇರು ಸಂಗ್ರಹದ ಗುರಿಯನ್ನು ಹೊಂದಿದ್ದೇವೆ. ಪ್ರತೀ ಷೇರಿನ ಮೌಲ್ಯವು 1000 ರೂ. ಇದ್ದು, ಕನಿಷ್ಠ 5 ಷೇರು ಹಾಗೂ ಗರಿಷ್ಠ 200 ಷೇರು ಖರೀದಿಸಿ ಕಂಪನಿಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ ಎಂದು ಹೇಳಿದರು.
ಇನ್ನು ಈ ಸಂಸ್ಥೆಯಲ್ಲಿ ಕೃಷಿ ಸಾಧಕರು, ಹೆಸರಾಂತ ಆರ್ಥಿಕ ತಜ್ಞರು, ಸಹಕಾರಿ ಪ್ರಮುಖರು, ಅಂತರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕರನ್ನು ಒಳಗೊಂಡ 16 ಜನರ ಸಮರ್ಥ ಆಡಳಿತ ಮಂಡಳಿಯನ್ನು ಹೊಂದಿದೆ. ಜೊತೆಗೆ ಸಂಸ್ಥೆಯು 11 ಶಾಖೆಗಳನ್ನು ಕೂಡ ಒಳಗೊಂಡಿದೆ.
ಆನೈನ್ ಮೂಲಕ ಷೇರು ಖರೀದಿಗೆ ಅವಕಾಶ ಕಲ್ಪಿಸಲಾಗಿದ್ದು, ದಕ್ಷಿಣ ಕನ್ನಡ ತೆಂಗು ರೈತರ ಉತ್ಪಾದಕರ ಸಂಸ್ಥೆಯ ವೆಬ್ ಸೈಟ್ ಮೂಲಕ ಆನೈನ್ ನಲ್ಲಿ ಗ್ರಾಹಕರು ನೇರವಾಗಿ ಷೇರು ಖರೀದಿಸಬಹುದಾಗಿದೆ. https://coconutfarmers.in/investment/ ಇದು ವೆಬ್ ಸೈಟ್ ಲಿಂಕ್ ಆಗಿದೆ. ನೇರವಾಗಿ ಇಲ್ಲಿರುವ ರಿಜಿಸ್ಟ್ರೇಶನ್ ಫಾರ್ಮ್ ಭರ್ತಿ ಮಾಡುವ ಮೂಲಕ ಷೇರು ಬಾಂಡ್ ಖರೀದಿ ಮಾಡಬಹುದು. ಇನ್ನು ಸಂಸ್ಥಟಯ ಷೇರು ಖರೀದಿ ಮಾಡುವಂತಹ ಗ್ರಾಹಕರು ಬಾಂಡ್ ಮೊತ್ತಕ್ಕೆ ಅನುಗುಣವಾಗಿ ಬಾಂಡ್ ಪ್ರತಿಯನ್ನು ಪಡೆಯಬಹುದಾಗಿದೆ. ನಿಗದಿತ ಅವಧಿಗೆ ಮಾತ್ರ ಈಕ್ವಿಟಿ ಷೇರು ಖರೀದಿಗೆ ಅವಕಾಶವಿದ್ದು, ಗ್ರಾಹಕರು ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಲಾಭಾಂಶ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ 18002030129 ಗೆ ಕರೆ ಮಾಡಬಹುದಾಗಿಗೆ ಅಥವಾ 8105487763 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೂಡಿಕೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.