ಕಾಸರಗೋಡು, ಏ 09 (DaijiworldNews/AK):ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಚೀಮೇನಿ ಸಮೀಪದ ಚೆಂಬ್ರಕಾನ ದಲ್ಲಿ ನಡೆದಿದೆ.
ಚೆಂಬ್ರಕಾನ ದ ರಂಜಿತ್ ರವರ ಪತ್ನಿ ಸಜೀನಾ ( 34) , ಮಕ್ಕಳಾದ ಗೌತಮ್ ( 9) ಮತ್ತು ತೇಜಸ್ ( 6) ಮೃತಪಟ್ಟವರು. ಮಂಗಳವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ.
ಮಕ್ಕಳು ವಿಷ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು , ಸಜೀನಾ ಕೈ ನರ ಕತ್ತರಿಸಿ ಬಳಿಕ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಸಜೀನಾ ಪೆರಿಂಗೋ ವಯಕ್ಕರ ಪಂಚಾಯತ್ ನ ಕ್ಲರ್ಕ್ ಆಗಿದ್ದರು.
ಮಾಹಿತಿ ತಿಳಿದು ಚೀಮೇನಿ ಠಾಣಾ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ಆರಂಭಿಸಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ , ಪೊಲೀಸರು ತನಿಖೆ ನಡೆಸುತ್ತಿದ್ದಾರೆ.