ಪರ್ಕಳ, ಏ 09 (DaijiworldNews/MS): ಬಿರು ಬೇಸಗೆಯ ಈ ದಿನಗಳಲ್ಲಿ ನೀರಿನ ಮೂಲಗಳು ಬತ್ತಿ ಹೋಗುತ್ತಿರುವ ಪರಿಸ್ಥಿತಿ ಇದ್ದರೂ ಇಲ್ಲೊಂದು ಕಡೆ ಬಾವಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಉಕ್ಕಿ ಹರಿಯುತ್ತಿದೆ. ಪರ್ಕಳದ ಭವಾನಿ ಕಟ್ಟೆಯ ಬಳಿ ಶ್ರೀ ಸತ್ಯಮತ ನಿಲಯದ ಬಾವಿಯಲ್ಲಿ ನೀರು ಉಕ್ಕಿ ಹರಿದು ಪಕ್ಕದಲ್ಲಿರುವ ಮಳೆನೀರು ಹೋಗುವ ತೋಡಿನಲ್ಲಿ ನೀರು ನಿಂತು ಹರಿಯಲಾರಂಭಿಸಿದ್ದು ಇದು ಅಚ್ಚರಿಗೆ ಕಾರಣವಾಗಿದೆ.
ಭವಾನಿಕಟ್ಟೆಯ ಪರಿಸರದಬಾವಿಗಳು ಬೇಸಿಗೆಯ ಕಾರಣದಿಂದ ನೀರು ಬತ್ತಿ ತಳಕಾಣುತ್ತಿದ್ದು, ಸತ್ಯಮತ ನಿಲಯದ ಸಂಜೀವ ನಾಯ್ಕ ಎಂಬವರ ಮನೆಯ ಬಾವಿಯಲ್ಲಿ ನೀರು ಕಡಿಮೆಯಾಗದೇ ಉಕ್ಕಿ ಪಕ್ಕದ ತೋಡಿನಲ್ಲಿ ನೀರು ಹರಿಯಲಾರಂಭಿಸಿದೆ..
ಏಳು ವರ್ಷದ ಜನವರಿ ತಿಂಗಳಿನಲ್ಲಿ ಕರಾವಳಿ ಭಾಗದಲ್ಲಿ ಲಘು ಭೂಕಂಪ ಆಗಿದ್ದು. ತದನಂತರ ಇಲ್ಲಿ 2017 ಮತ್ತು 2018ನೇ ವರ್ಷದಲ್ಲಿ ನೀರು ಉಕ್ಕಿ ಹರಿಯಲಾರಂಭಿಸಿತ್ತು. ನಂತರದ ವರುಷದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. ಈಗ ಮತ್ತೆ ನೀರು ತೋಡಿನಲ್ಲಿ ಹರಿಯಲಾರಂಭಿಸಿದೆ.. ಈ ಮನೆಯ ಬಾವಿಗೆ. ಮೂರು ವಿದ್ಯುತ್ ಎಲೆಕ್ಟ್ರಾನಿಕ್ ಪಂಪುಗಳನ್ನು ಅಳವಡಿಸಲಾಗಿದ್ದು. ಮೂರು ಮನೆಯವರು ದಿನನಿತ್ಯ ನೀರು ತೆಗೆಯುತ್ತಾರೆ. ಹಾಗೆ ವಾರಕ್ಕೊಮ್ಮೆ ಸೀಮೆಎಣ್ಣೆ ಪಂಪಿನ ಮೂಲಕವೂ ನೀರನ್ನು ತೋಟಕ್ಕೆ ಹಾಯಿಸುತ್ತಾರೆ. ಆದರೂ ಕೂಡ ನೀರು ಉಕ್ಕಿ ಉಕ್ಕಿ ಮೇಲ್ಮುಖವಾಗಿ ಬರುತ್ತದೆ. ಬಾವಿಯ ಪಕ್ಕದಲ್ಲಿ ರಂಧ್ರವಿರುವ ಕಾರಣ ತೋಡಿನಲ್ಲಿ ನೀರು ಹರಿಯಲಾರಂಭಿಸಿದೆ..ಈ ಪರಿಸರದಲ್ಲಿ ಅಪ್ರಾಯ ನಾಯ್ಕ ಅವರ ಮನೆಯ ಎದುರು ಬಾವಿಯಲ್ಲಿ ನೀರು ತುಂಬಿದೆ. ಹಾಗೆಯೇ ಪ್ರಜ್ವಲ್ ಪೂಜಾರಿ. ಏಕನಾಥನಾಯ್ಕ್. ದೇವೇಂದ್ರ ನಾಯ್ಕ್ ಮೊದಲಾದ ಮನೆಯವರ ಎದುರು ಮತ್ತು ಅಂಗಳದಲ್ಲಿರುವ ಬಾವಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.
ಏಳು ವರ್ಷಗಳ ಹಿಂದೆ ಭೂ ವಿಜ್ಞಾನಿಗಳು ಈ ಪರಿಸರಕ್ಕೆ ಭೇಟಿ ನೀಡಿದ್ದರು ನೀರು ಉಕ್ಕಿರುವುದನ್ನು. ಕಂಡು ಈ ಭಾಗದಲ್ಲಿ ಮುರಕಲ್ಲುಗಳುಹೆಚ್ಚಿನ ಭಾಗ ಇದೆ. ಭೂಕಂಪನದಿಂದ ಮುರಕಲ್ಲುಪದರಗಳು (ಲ್ಯಾಟರೈಟ್ ) ಜರುಗಿ ನೀರು ಒಸರಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ನೆನಪಿಸಿಕೊಂಡಿದ್ದಾರೆ.. ಈ ಬಾರಿ ಮತ್ತೆ ಏಪ್ರಿಲ್ ತಿಂಗಳಲ್ಲಿ ಶುದ್ಧ ನೀರು ತೋಡಿನಲ್ಲಿ ಹರಿಯುವುದು ಕಂಡುಬಂದಿದ್ದು. ಮತ್ತೆ. ಕೌತುಕ ಹೆಚ್ಚಿದೆ.. ಅಂದು ಸಾವಿರಾರು ಜನರು ಈ ಪ್ರದೇಶಕ್ಕೆ ಭೇಟಿ ನೀಡಿದ್ದರು.