ಮಂಗಳೂರು, ಏ 09 (DaijiworldNews/MS): ಮತದಾನದ ಬಗ್ಗೆ ಜಾಗೃತಿ ಮೂಡಿಸಲು ದಕ್ಷಿಣ ಕನ್ನಡ ಜಿಲ್ಲೆಯ ಸ್ವೀಪ್ ಸಮಿತಿ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಬೋಳೂರು ಮೊಗವೀರ ಮಹಾಸಭಾ ಆಶ್ರಯದಲ್ಲಿ ಪಲ್ಗುಣಿ ನದಿಯಲ್ಲಿ ಸುಲ್ತಾನ್ ಬತ್ತೇರಿಯಿಂದ ಬಂದರಿನವರೆಗೆ ಜಲಥಾನ್ (ದೋಣಿಗಳ ಮೆರವಣಿಗೆ) ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಆನಂದ್, ಪಾಲಿಕೆ ಆಯುಕ್ತ ಆನಂದ ಸಿ.ಎಲ್, ಬೋಳೂರು ಮೊಗವೀರ ಮಹಾಸಭಾದ ಅಧ್ಯಕ್ಷ ಯಶವಂತ ಮೆಂಡನ್, ಉಪಾಧ್ಯಕ್ಷ ರಂಜನ್ ಕಾಂಚನ್, ಮೊಗವೀರ ಮಹಿಳಾ ಮಹಾಸಭಾದ ಯೋಗಿನಿ ಬಂಗೇರ ಭಾಗವಹಿಸಿದರು.
ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಡಾ.ಕೆ.ಆನಂದ್ ಅವರು ಮತದಾನದಲ್ಲಿ ಭಾಗವಹಿಸುವ ಹಾಗೂ ಈ ಕುರಿತು ಜಾಗೃತಿ ಮೂಡಿಸುವ ಪ್ರತಿಜ್ಞೆಯನ್ನು ದೋಣಿಯಲ್ಲೇ ಬೋಧಿಸಿದರು.