ಉಡುಪಿ, ಏ 08 (DaijiworldNews/JP): ಚುನಾವಣೆ ಬಾಂಡ್ ಗೆ ಕೆಂದ್ರ ಸರಕಾರ ಕಾನೂನು ತಂದು ಎಲ್ಲಾ ಪಕ್ಷಗಳು ಚುನಾವಣೆ ಬಾಂಡ್ ತೆಗೆದುಕೊಂಡಿದೆ ಆದರೆ ಕಾಂಗ್ರೆಸ್ ಪಕ್ಷಕ್ಕೆ ದುಡ್ಡು ಎಂದರೆ ಭ್ರಷ್ಟಾಚಾರ ಎಂದು ಆಗಿದೆ ಯಾಕೆದರೆ ಅವರಿಗೆ ಅದನ್ನು ಹೇಳಿ ಹೇಳಿ ಅದು ಅಭ್ಯಾಸವಾಗಿದೆ, ಬ್ರಹ್ಮಂಡ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ ನವರು ಬಾಂಡ್ ಬಗ್ಗೆ ಮಾತನಾಡದೆ ಇದ್ದರೆ ಅವರ ಮಾನ ಮರ್ಯಾದೆ ಉಳಿಯುತ್ತದೆ ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ರವರು ಹೇಳಿದರು.
ಇಂದು ಬಿಜೆಪಿ ಜಿಲ್ಲಾ ಮಾಧ್ಯಮ ಕಚೇರಿ ಕಡಿಯಾಳಿಯಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಎಮ್ .ಎಲ್ . ಸಿ ಹುದ್ದೆಗೆ ಅಂಕಾಕ್ಷಿ ನಾನು, ಲೋಕಸಭೆಗೂ ಅಂಕಾಕ್ಷಿಯಾಗಿದ್ದೆ, ಆದರೆ ನಮ್ಮ ಪಕ್ಷ ಸೀಟ್ ಕೊಡದ್ದಿರು ನಮ್ಮ ಕೆಲಸ ನಿಲ್ಲುವುದಿಲ್ಲ ನಾನು ನಾನ್ ಸ್ಟಾಪ್ ಕೆಲಸ ಮಾಡುತ್ತೇನೆ. ಯಾರೆ ಅಭ್ಯರ್ಥಿ ಬಂದರೂ ನಾವು ಅವರನ್ನು ಗೆಲ್ಲುಸೊದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಸಹ ವಕ್ತಾರರ ವಿಜಯ್ ಕುಮಾರ್ ಉದ್ಯಾವರ, ಬಿಜೆಪಿ ನಾಯಕಿ ಗೀತಾಂಜಲಿ ಸುವರ್ಣ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಮಹಿಳಾ ಮೋರ್ಚಾ ನಿಕಟಪೂರ್ವ ಅಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ಮಾಧ್ಯಮ ಪ್ರಮುಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಮತ್ತಿತರು ಉಪಸ್ಥಿತರಿದ್ದರು