ಮಂಗಳೂರು, ಏ 08 (DaijiworldNews/AK): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಏ.26ರಂದು ನಡೆಯುವ ಚುನಾವಣೆಯಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ 11 ಮಂದಿಯ ಪೈಕಿ 10 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿತ್ತು. ಇಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಅದರಂತೆ ಪಕ್ಷೇತರ ಅಭ್ಯರ್ಥಿ ಸತೀಶ್ ಬೂಡುಮಕ್ಕಿ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಇದೀಗ ಕಣದಲ್ಲಿ ಕಾಂಗ್ರೆಸ್ನ ಪದ್ಮರಾಜ್ ಆರ್., ಬಿಜೆಪಿಯ ಬ್ರಿಜೇಶ್ ಚೌಟ, ಬಹುಜನ ಸಮಾಜ ಪಾರ್ಟಿಯ ಕಾಂತಪ್ಪ ಅಲಂಗಾರ್, ಕರುನಾಡ ಸೇವಕ ಪಕ್ಷದ ದುರ್ಗಾಪ್ರಸಾದ್, ಉತ್ತಮ ಪ್ರಜಾಕೀಯ ಪಾರ್ಟಿಯ ಪ್ರಜಾಕೀಯ ಮನೋಹರ, ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್)ಯ ರಂಜಿನಿ ಎಂ. ಪಕ್ಷೇತರರಾದ ದೀಪಕ್ ರಾಜೇಶ್ ಕುವೆಲ್ಲೋ, ಮ್ಯಾಕ್ಸಿಂ ಪಿಂಟೋ, ಸುಪ್ರಿತ್ ಕುಮಾರ ಪೂಜಾರಿ ಕಣದಲ್ಲಿದ್ದಾರೆ.