ಪುತ್ತೂರು, ಏ 8(DaijiworldNews/AA): ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಬಂದ ಷೇರು ಮಾರುಕಟ್ಟೆ ಹೂಡಿಕೆ ಕುರಿತ ಜಾಹೀರಾತು ನಂಬಿ ವ್ಯಕ್ತಿಯೋರ್ವರು 46.1 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಮುಹಮ್ಮದ್ ಅನ್ಸಾಫ್ ಎಂ. (40) ಹಣ ಕಳೆದುಕೊಂಡಿದ್ದು, ಈ ಬಗ್ಗೆ ಅವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ದೂರುದಾರರು ಫೆ. 2 ರಂದು ಫೇಸ್ಬುಕ್ನಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ಬಂದ ಜಾಹೀರಾತು ನೋಡಿದ್ದು, ಅದರಲ್ಲಿ “ಗುಡ್ ಇನ್ಕಂ ರಿಸಲ್ಟ್’ ಎಂಬುದಾಗಿ ಇತ್ತು. ಬಳಿಕ ಅದರ ಲಿಂಕ್ ಒಪನ್ ಮಾಡಿದಾಗ ವಾಟ್ಸಪ್ ಆಪ್ ಪೇಜ್ ಒಂದು ಕಾಣಿಸಿದೆ. ಈ ಪೇಜ್ ನಲ್ಲಿ ಅಪರಿಚಿತ ವ್ಯಕ್ತಿಯು ಕಂಪೆನಿಯಲ್ಲಿರುವ ಸ್ಟಾಕ್ನ ಕುರಿತು ಮಾಹಿತಿ ನೀಡಿದ್ದಾನೆ. ನಂತರ ಬೇರೊಂದು ವಾಟ್ಸಪ್ ಗ್ರೂಪ್ಗೆ ದೂರುದಾರರನ್ನು ಸೇರಿಸಿದ್ದಾನೆ.
ಬಳಿಕ ಹಣ ಹೂಡಿಕೆ ಮಾಡಲು ಬೇರೊಂದು ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುವಂತೆ ತಿಳಿಸಿ, ಅಪರಿಚಿತ ವ್ಯಕ್ತಿ ನೀಡಿದ ಲಿಂಕ್ ಒಪನ್ ಮಾಡಿದಾಗ ವಿಕಿಂಗ್ ಗ್ಲೋಬಲ್ ಇನ್ವೆಸ್ಟರ್ಸ್ ಎಂಬ ವಾಟ್ಸಪ್ ಗ್ರೂಪ್ ಒಂದು ಒಪನ್ ಆಗಿದೆ. ಬಳಿಕ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿ ಆಪ್ ಒಂದನ್ನು ಡೌನ್ ಲೋಡ್ ಮಾಡಲು ಹೇಳಿದ್ದಾರೆ. ಅದರಂತೆ ದೂರುದಾರರು ಆಪ್ ಡೌನ್ ಲೋಡ್ ಮಾಡಿ ಅದರಲ್ಲಿ ಖಾತೆಯೊಂದನ್ನು ತೆರೆದು, ತನ್ನ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಬ್ಯಾಂಕ್ ವಿವರವನ್ನು ನೀಡಿದ್ದಾರೆ. ನಂತರ 10,000 ರೂ. ಹಣ ಜಮೆ ಮಾಡಿದ್ದಾರೆ.
ನಂತರ ದೂರುದಾರರಿಗೆ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಅಪರಿಚಿತ ವ್ಯಕ್ತಿಗಳು ತಿಳಿಸಿದ್ದು, ಅದರಂತೆ ದೂರುದಾರರು ಆ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ ಒಟ್ಟು 46,10,000 ರೂ. ಹಣ ವರ್ಗಾವಣೆ ಮಾಡಿದ್ದಾರೆ. ಹಂತ-ಹಂತವಾಗಿ ಒಟ್ಟು 2,00,000 ರೂ. ಹಣ ದೂರುದಾರರ 2 ಖಾತೆಗೆ ಮರು ಜಮೆಯಾಗಿದ್ದು, ಉಳಿದ ಹಣವನ್ನು ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.