ಸುಳ್ಯ, ಏ 07 (DaijiworldNews/AK): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಸತತ 13 ನೇ ವರ್ಷದಿಂದ ಕರ್ನಾಟಕದ ಅಗ್ರ ಆದಾಯ ತರುವ ದೇವಾಲಯವಾಗಿ ಹೊರಹೊಮ್ಮಿದೆ. 2023-24 ರ ಆರ್ಥಿಕ ವರ್ಷದಲ್ಲಿ ದೇವಸ್ಥಾನವು 146.01 ಕೋಟಿ ರೂಪಾಯಿ ಆದಾಯ ಹೊಂದಿದೆ ಎಂದು ವರದಿಯಾಗಿದೆ. ಕಳೆದ ವರ್ಷ ದೇವಸ್ಥಾನದ ಆದಾಯ 123 ಕೋಟಿ ರೂ. ಆಗಿತ್ತು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ 68.23 ಕೋಟಿ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ 30.73 ಕೋಟಿ ರೂ, ಸವದತಿ ರೇಣುಕಾ ಎಲ್ಲಮ್ಮ ದೇವಸ್ಥಾನ 25.80 ಕೋಟಿರೂ. ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ 15.27 ಕೋಟಿ ರೂ. ಹುಲಿಗೆಮ್ಮ ದೇವಿ ದೇವಸ್ಥಾನ 15.27 ಕೋಟಿ ರೂ., ಕೊಪ್ಪಳದ ಹುಲಿಗೆಮ್ಮ ದೇವಿ ದೇವಸ್ಥಾನ 16 ಕೋಟಿ ರೂ. 13.65 ಕೋಟಿ ರೂ. ಬೆಂಗಳೂರಿನ ಬನಶಂಕರಿ ದೇವಸ್ಥಾನ 11.37 ಕೋಟಿ ರೂ. ಆದಾಯ ಗಳಿಸಿದೆ.
ದೇವಸ್ಥಾನಕ್ಕೆ ಮುಖ್ಯವಾಗಿ ಗುತ್ತಿಗೆಗಳಿಂದ, ತೋ ಟದ ಉತ್ಪನ್ನ ದಿಂದ, ಕಟ್ಟಡ ಬಾಡಿಗೆಯಿಂದ, ಕಾಣಿಕೆಯಿಂದ, ಕಾಣಿಕೆ ಹುಂಡಿಯಿಂದ, ಹರಕೆ ಸೇವೆಗಳಿಂದ, ಅನು ದಾನದಿಂದ, ಶಾಶ್ವತ ಸೇವೆಗಳಿಂದ, ಸೇವೆ ಗಳಿಂದ ಆದಾಯ ಬರುತ್ತಿದೆ.
ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳ ಒಟ್ಟು ಆದಾಯದ ಎಣಿಕೆ ಈಗಾಗಲೇ ಪೂರ್ಣಗೊಂಡಿದೆ. ಇದೀಗ ಸೇವೆ ಮತ್ತು ಕೊಡುಗೆಯಿಂದ ಬರುವ ಆದಾಯದ ವಿಭಜನೆ ಕಾರ್ಯ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.
2006-07ರಲ್ಲಿ ಕುಕ್ಕೆ ದೇವಸ್ಥಾನದಿಂದ 19.76 ಕೋಟಿ ರೂ. 2007-08 ರಲ್ಲಿ ಈ ಸಂಖ್ಯೆಯು 24.44 ಕೋಟಿ ರೂ.ಗೆ ಏರಿತ್ತು ಮತ್ತು ದೇವಾಲಯವು ಕರ್ನಾಟಕದ ಅತ್ಯಂತ ಶ್ರೀಮಂತವಾಯಿತು. ಅಂದಿನಿಂದ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.