ಮಂಗಳೂರು, ಮೇ 1 (Daijiworld News/SM): ನನ್ನನ್ನು ಮತ್ತೊಮ್ಮೆ ಪಕ್ಷದಿಂದ ಉಚ್ಛಾಟಿಸಿದರೂ ಪರವಾಗಿಲ್ಲ ನಾಯಕರು ತಪ್ಪು ಮಾಡಿದ್ದಲ್ಲಿ ಅದನ್ನು ತಪ್ಪು ಎಂದು ಹೇಳುತ್ತೇನೆ ಎಂದು ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಜಿ ಸಚಿವ ಬಿ ಎ ಮೊಹಿದಿನ್ ಅವರ ಆತ್ಮಕಥನದ ಇಂಗ್ಲಿಷ್ ಅನುವಾದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಯಾವುದೇ ಒಂದು ಪಕ್ಷದಲ್ಲಿದ್ದವರು ಆ ಪಕ್ಷದ ನಾಯಕರ ಮಾತುಗಳನ್ನು ಕೇಳಬೇಕು. ಆದರೆ, ನಾನು ಪ್ರಜಾಪ್ರಭುತ್ವದಂತೆ ಮಾತನಾಡುತ್ತೇನೆ. ಯಾವುದೇ ನಾಯಕ ತಪ್ಪು ಮಾಡಿದ್ದಲ್ಲಿ ಅದನ್ನು ಸಮರ್ಥಿಸಿಕೊಳ್ಳದೆ, ತಪ್ಪು ಎಂದು ತೋರಿಸಿಕೊಡುತ್ತೇನೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.