ಕಾಸರಗೋಡು, ಏ 04(DaijiworldNews/AA): ಮುಂಬರುವ ಲೋಕಸಭಾ ಚುನಾವಣೆಗೆ ಕಾಸರಗೋಡು ಕ್ಷೇತ್ರದ ನಾಮನಿರ್ದೇಶನ ಪ್ರಕ್ರಿಯೆಯು ಎಲ್ಲಾ ರೀತಿಯಲ್ಲೂ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆದಿದ್ದು, ಅಭ್ಯರ್ಥಿಯು ಮಾಡಿರುವ ಆರೋಪಗಳೆಲ್ಲವೂ ನಿರಾಧಾರ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಕೆ. ಇನ್ಬ್ ಶೇಖರ್ ಸ್ಪಷ್ಟಪಡಿಸಿದ್ದಾರೆ.
ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ಅವರು ಬುಧವಾರದಂದು, ನಾಮಪತ್ರ ಸಲ್ಲಿಸಲು ತನಗೆ ಮೊದಲು ಅವಕಾಶ ನೀಡಿಬೇಕಿತ್ತು ಬೆಳಗ್ಗೆ 9 ಗಂಟೆಗೆ ಟೋಕನ್ ಪಡೆಯಲು ಆಗಮಿಸಿದ್ದೆ, ಆದರೆ ಬಳಿಕ ಬಂದ ಸಿಪಿಐ(ಎಂ) ಅಭ್ಯರ್ಥಿ ಎಂ. ವಿ ಬಾಲಕೃಷ್ಣನ್ ರಿಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಚುನಾವಣಾಧಿಕಾರಿಗಳು, ಏಪ್ರಿಲ್ 4 ರಂದು ಮಧ್ಯಾಹ್ನ 3.00 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಒಂದೇ ಸಮಯದಲ್ಲಿ ನಾಮಪತ್ರ ಸಲ್ಲಿಸಲು ಅನೇಕರು ಬಂದರೆ ಜಿಲ್ಲೆಯ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಸಹಾಯ ಕೇಂದ್ರದ ಮೂಲಕ ಟೋಕನ್ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಈ ಹಿಂದೆಯೇ ತಿಳಿಸಲಾಗಿತ್ತು. ಅಭ್ಯರ್ಥಿ ಅಥವಾ ಅವರ ಪ್ರಸ್ತಾವಕರು ನಾಮನಿರ್ದೇಶನದ ಪ್ರಸ್ತಾವನೆಗಳನ್ನು ಸರಿಯಾಗಿ ಸಲ್ಲಿಸುವ ಮೂಲಕ ಟೋಕನ್ ಅನ್ನು ಪಡೆಯಬಹುದು ಎಂದು ಸಹ ಸೂಚಿಸಲಾಗಿತ್ತು. ಪತ್ರಿಕಾ ಪ್ರಕಟಣೆಯಲ್ಲಿ ಸೂಚಿಸಿದಂತೆ, ಏಪ್ರಿಲ್ 3 ರಂದು ಬೆಳಿಗ್ಗೆ 10.00 ಗಂಟೆಗೆ ಟೋಕನ್ ಗಳನ್ನು ವಿತರಿಸಲಾಯಿತು. ಮೊದಲ ಟೋಕನ್ ಅನ್ನು 7 ಗಂಟೆ 06 ನಿಮಿಷಕ್ಕೆ ತಲುಪಿದ ಎಂ ವಿ ಬಾಲಕೃಷ್ಣನ್ ಅವರ ಪ್ರಸ್ತಾವಕರು ಅಜೀಜ್ ಕಡಪ್ಪುರಂ ಅವರಿಗೆ ನೀಡಲಾಯಿತು ಮತ್ತು ಎರಡನೇ ಟೋಕನ್ ಅನ್ನು 8 ಗಂಟೆ 55 ನಿಮಿಷ ಬಂದಿರುವ ರಾಜಮೋಹನ್ ಉಣ್ಣಿ ತ್ತಾನ್ ಅವರಿಗೆ ನೀಡಲಾಯಿತು. ಆದರೆ ಅವರು ಟೋಕನ್ ಸ್ವೀಕರಿಸಲು ನಿರಾಕರಿಸಿದರು. ಇದಲ್ಲದೆ, ಈ ಎಲ್ಲಾ ಮಾಹಿತಿಯು ಸ್ಥಳದಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಗಳಿರುವಂತೆ ಬಂದ ಮಾಹಿತಿಯಾಗಿದೆ. ಹಾಗಾಗಿ ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಉಲ್ಲೇಖಿಸಿರುವ ಅವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲ ಆರೋಪಗಳು ನಿರಾಧಾರ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.