ಕಾಸರಗೋಡು, ಏ 03(DaijiworldNews/AK):ಮುಂಬರುವ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ನಡುವೆಯೇ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಅಭ್ಯರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದ್ದರಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೊಂದಲಕ್ಕೆ ಕಾರಣವಾಯಿತು.
ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿ ತ್ತಾನ್ ಅವರು ಇಂದು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಯುಡಿಎಫ್ ಜಿಲ್ಲಾಧ್ಯಕ್ಷ ಕಲ್ಲತ್ರ ಮಾಹಿನ್ ಹಾಜಿ, ಶಾಸಕ ಎನ್ ಎ ನೆಲ್ಲಿಕುನ್ನು, ಎ ಕೆ ಎಂ ಅಶ್ರಫ್, ಮತ್ತಿತರರಿದ್ದರು. ಉಪಸ್ಥಿತರಿದ್ದರು.
ಇದರ ಬೆನ್ನಲ್ಲೇ ಸಿಪಿಐ(ಎಂ) ಅಭ್ಯರ್ಥಿ ಎಂ ವಿ ಬಾಲಕೃಷ್ಣನ್ ಮಾಸ್ತರ್ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಕೆ ಇಂಪಾ ಶೇಖರ್ ಅವರಿಗೆ ನಾಮಪತ್ರ ಸಲ್ಲಿಸಿದರು. ಮಾಜಿ ಸಂಸದ ಪಿ ಕರುಣಾಕರನ್, ಶಾಸಕ ಸಿ ಎಚ್ ಕುಂಞಂಬು, ಇ ಚಂದ್ರಶೇಖರನ್, ಅಜೀಜ್ ಕಡಪ್ಪುರ ಉಪಸ್ಥಿತರಿದ್ದರು.
ಬಿಜೆಪಿಯ ಅಶ್ವಿನಿ ಎಂಎಲ್ ಮತ್ತು ಡಮ್ಮಿ ಅಭ್ಯರ್ಥಿ ಎಂ.ವೇಲಾಯುಧನ್, ಬಿಎಸ್ಪಿಯ ಎಂ.ಸುಕುಮಾರಿ, ಸ್ವತಂತ್ರ ಅಭ್ಯರ್ಥಿ ಟಿ.ಅನಿಶ್ ಕುಮಾರ್, ಕೇಶವ ನಾಯ್ಕ್ ಸೇರಿದಂತೆ ಇತರೆ ಪಕ್ಷಗಳ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.
ಆದರೆ, ಡಿಸಿ ಕಚೇರಿ ಆವರಣದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಸಂಸದರ ನಡುವೆ ಗದ್ದಲ, ಪ್ರತಿಭಟನೆಗಳು ನಡೆದಿದ್ದರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವಿವಾದಕ್ಕೆ ಎಡೆಮಾಡಿ ಕೊಟ್ಟಿತ್ತು.
ಮೊದಲು ನಾಮಪತ್ರ ಸಲ್ಲಿಸಲು ಅವಕಾಶ ನೀಡಬೇಕಿತ್ತು ಎಂದು ಆರೋಪಿಸಿದ ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಟೋಕನ್ ಪಡೆಯಲು ಬೆಳಗ್ಗೆ 9 ಗಂಟೆಗೆ ಬಂದಿದ್ದೆ. ಆದರೆ ನಂತರ ಬಂದ ಸಿಪಿಐ(ಎಂ) ಅಭ್ಯರ್ಥಿ ಎಂವಿ ಬಾಲಕೃಷ್ಣನ್ ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನನ್ನ ಮುಂದೆ ಎಂದು ಆರೋಪಿಸಿದರು.
ಬೆಳಿಗ್ಗೆ ೯ ಗಂಟೆಯಿಂದ ಟೋಕನ್ ನೀಡುವುದಾಗಿ ಜಿಲ್ಲಾಧಿಕಾರಿ ಮಂಗಳವಾರ ಸಂಜೆ ಮಾಹಿತಿ ನೀಡಿದ್ದರು. ಇದರಂತೆ ಬೆಳಿಗ್ಗೆ 9 ಗಂಟೆಗೆ ರಾಜ್ ಮೋಹನ್ ಉಣ್ಣಿ ತ್ತಾನ್ ಜಿಲ್ಲಾಧಿಕಾರಿ ಕಚೇರಿಗೆ ತಲಪಿದ್ದರು. ಆದರೆ ಬೆಳಿಗ್ಗೆ ಏಳು ಗಂಟೆಗೆ ಸಿಪಿಐಎಂ ಅಭ್ಯರ್ಥಿ ಎಂ . ವಿ ಬಾಲಕೃಷ್ಣನ್ ಪರ ಅಜೀಜ್ ಕಡಪ್ಪುರ ಮೊದಲ ಟೋಕನ್ ಪಡೆದು ತೆರಳಿದ್ದರು. 11 ಗಂಟೆಗೆ ನಾಮಪತ್ರ ಪ್ರಕ್ರಿಯೆ ಆರಂಭಗೊಂಡಾಗ ಎಂ . ವಿ ಬಾಲಕೃಷ್ಣನ್ ರಿಗೆ ಅವಕಾಶ ನೀಡುತ್ತಿದ್ದಂತೆ ಪ್ರಶ್ನಿಸಿದ ಉಣ್ಣಿತ್ತಾ ನ್ ಪ್ರತಿಭಟನೆ ನಡೆಸಿ ಧರಣಿ ಕುಳಿತರು.
ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿದರು. .ಬೆಳಿಗ್ಗೆ 9 ಗಂಟೆಯಿಂದ 10 ಗಂಟೆ ತನಕ ಟೋಕನ್ ನೀಡುವುದಾಗಿ ಚುನಾವಣಾಧಿಕಾರಿ ತಿಳಿಸಿದ್ದರೂ ಏಳು ಗಂಟೆಗೆ ಸಿಪಿಐ ಎಂ ಅಭ್ಯರ್ಥಿಗೆ ಟೋಕನ್ ನೀಡಿದ್ದು ಹೇಗೆ ಎಂಬುದನ್ನು ಉಣ್ಣಿ ತ್ತಾನ್ ಪ್ರಶ್ನಿಸಿದರು.ಟೋಕನ್ ಗಾಗಿ ತೆರಳಿದ ಸಂದರ್ಭದಲ್ಲಿ ಮೊದಲ ಟೋಕನ್ ಈಗಾಗಲೇ ನೀಡಲಾಗಿದೆ. ಎಂದು ಓರ್ವ ಪೊಲೀಸ್ ಅಧಿಕಾರಿ ಹೇಳಿದ್ದು, ಎರಡನೇ ಟೋಕನ್ ನೀಡಲಾಗುವುದು ಎಂದು ತಿಳಿಸಿದರು. ಆದರೆ ಸಮಯಕ್ಕಿಂತ ಮೊದಲೇ ಟೋಕನ್ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದರು. ಆಡಳಿತ ಪಕ್ಷದ ಪರವಾಗಿ ಚುನಾವಣಾಧಿಕಾರಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು